/ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ)ದ ಬಸವತೀರ್ಥ ವಿದ್ಯಾಪಿಠದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 2000ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಗುಂಡಯ್ಯ ತೀರ್ಥ, ಸುಂದರರಾಜ, ಸುಭಾಷ ಗಂಗಾ, ಮಧುಕರ ದೇಶಪಾಂಡೆ, ಶಿವಶಂಕರ ಬೇಟಗೇರಿ, ವಿದ್ಯಾವತಿ ತೀರ್ಥ, ಶೋಭಾವತಿ ಇತರರಿದ್ದರು.
ಹುಮನಾಬಾದ್: ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹಳ್ಳಿಖೇಡ(ಬಿ)ದ ಬಸವತೀರ್ಥ ವಿದ್ಯಾಪಿಠದ ಆಡಳಿತಾಧಿಕಾರಿ ಗುಂಡಯ್ಯ ತೀರ್ಥ ಹೇಳಿದರು.
ಹಳ್ಳಿಖೇಡ (ಬಿ)ದ ಬಸವತೀರ್ಥ ವಿದ್ಯಾಪಿಠದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 2000ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವು ಕಲಿಸಿದ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ನಮ್ಮ ಜೀವನ ಸಾರ್ಥಕವಾಗಿರುವುದಕ್ಕೆ ಸಾಯಾಗಿದೆ. ವಿದ್ಯಾರ್ಥಿಗಳ ಈ ಪ್ರೀತಿ ಮತ್ತು ಗೌರವ ನಮಗೆ ಅಪಾರ ಸಂತೋಷ ತಂದಿದೆ ಎಂದು ಹೇಳಿದರು.
ನಿವೃತ್ತ ಶಿಕ ಸುಂದರರಾಜ ಮಾತನಾಡಿ, 25 ವರ್ಷಗಳ ಹಿಂದೆ ಶಿಣ ನೀಡಿದ ಶಿಕರನ್ನು ಮರೆಯದೆ ಇಂದು ಗೌರವಿಸುತ್ತಿರುವುದು ವಿದ್ಯಾರ್ಥಿಗಳ ಸಂಸ್ಕಾರ ಮತ್ತು ಕೃತತೆಯ ಸಂಕೇತವಾಗಿದೆ. ನಿಮ್ಮ ಈ ಕಾರ್ಯ ನಿಜಕ್ಕೂ ಶ್ಲಾನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ ಸುಭಾಷ ಗಂಗಾ ಮಾತನಾಡಿ, ಗುರು&ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು. ನಮ್ಮ ವಿದ್ಯಾರ್ಥಿಗಳು ಉತ್ತಮ ಶಿಣದ ಜೊತೆಗೆ ಸಂಸ್ಕಾರವನ್ನೂ ಮೈಗೂಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಶಿಕರಾದ ಮಧುಕರ ದೇಶಪಾಂಡೆ, ಶಿವಶಂಕರ ಬೇಟಗೇರಿ, ವಿದ್ಯಾವತಿ ತೀರ್ಥ, ಶೋಭಾವತಿ, ದಿನೇಶ ಮಾತನಾಡಿ ಹಳೆಯ ನೆನಪು ಹಂಚಿಕೊಂಡರು. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಅನುಭವ ಹಾಗೂ ಶಿಕರ ಮಾರ್ಗದರ್ಶನವನ್ನು ಸ್ಮರಿಸಿ ಭಾವುಕರಾದರು. ವಿಜಯಲ್ಮ ಸ್ವಾಗತಿಸಿದರು. ಅಂಬಿಕಾ ವಂದಿಸಿದರು. ರಾಜೇಶ್ವರಿ ನಿರೂಪಣೆ ಮಾಡಿದರು. ಶಾಲೆಯ ಹಳೆಯ ಶಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.