ಕಠಿಣ ಪರಿಶ್ರಮದಿಂದ ಸಾಧನೆ ಸಾಧ್ಯ

ಬೀದರ್​ ತಾಲೂಕಿನ ರಂಜೋಳ ಖೇಣಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮದರ್​ಖಾನ್​, ರಕೀರ್​ ಹುಸೇನ್​, ಮಂಜುನಾಥ ಎನ್​.ಆರ್​. ಗೀತಾಗಡ್ಡಿ, ಜಗನ್ನಾಥ ಪಾಟೀಲ್​ ಇತರರಿದ್ದರು.
ಬೀದರ್​ ತಾಲೂಕಿನ ರಂಜೋಳ ಖೇಣಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮದರ್​ಖಾನ್​, ರಕೀರ್​ ಹುಸೇನ್​, ಮಂಜುನಾಥ ಎನ್​.ಆರ್​. ಗೀತಾಗಡ್ಡಿ, ಜಗನ್ನಾಥ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಬೆಲ್ದಾಳೆ ಅಭಿಮತ
  • ರಂಜೋಳ ಖೇಣಿಯಲ್ಲಿ ಉದ್ಯಾನವನ ಉದ್ಘಾಟನೆ
ಬೀದರ್​: ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು ಹಾಗೂ ಗುರಿಯೊಂದಿಗೆ ಮುಂದುವರಿದರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲೂಕಿನ ರಂಜೋಳ ಖೇಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಶಾಲಾ ಉದ್ಯಾನವನ ಉದ್ಘಾಟನೆ ಹಾಗೂ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಭವಿಷ್ಯದ ಗುರಿ ನಿಗದಿಪಡಿಸಿಕೊಂಡು ನಿರಂತರವಾಗಿ ಶ್ರಮಿಸಬೇಕು. ಗುರು&ಹಿರಿಯರನ್ನು ಗೌರವದಿಂದ ಕಾಣಬೇಕು ಎಂದರು.
ಶಾಲೆಯ ಮೈದಾನದಲ್ಲಿ ಉದ್ಯಾನವನ ನಿರ್ಮಿಸಿದ್ದು ಖುಷಿ ತಂದಿದೆ. ಇದು ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ೇತ್ರ ಶಿಣಾಧಿಕಾರಿ ಮದರ್​ಖಾನ್​ ಮಾತನಾಡಿ, ಶಿಕರ ಕೊರತೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ರಂಜೋಳ ಖೇಣಿ ಶಾಲೆ ಅತ್ಯುತ್ತಮ ಲಿತಾಂಶ ಸಾಧಿಸಿರುವುದು ಶ್ಲಾನೀಯ ಎಂದರು.
ಮುಖ್ಯಗುರು ಮಂಜುನಾಥ ಎನ್​.ಆರ್​. ಮಾತನಾಡಿ, ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಂ ಪೋಷಣ್​ ಅಭಿಯಾನದ ಸಹಾಯಕ ನಿರ್ದೇಶಕ ರಕೀರ್​ ಹುಸೇನ್​, ಡಯಟ್​ ಉಪನ್ಯಾಸಕರಾದ ಸಂತೋಷ ಪೂಜಾರಿ, ಗೀತಾ ಗಡ್ಡಿ, ಮುಖಂಡ ಜಗನ್ನಾಥ ಪಾಟೀಲ್​ ಸಿರಕಟನಳ್ಳಿ ಇತರರಿದ್ದರು. ಸತ್ಯನಾರಾಯಣ ಹಾಗೂ ರೇಖಾ ನಿರೂಪಣೆ ಮಾಡಿದರು. ವಿಷ್ಣುಕಾಂತ ಠಾಕೂರ್​ ಸ್ವಾಗತಿಸಿದರು. ಸಚಿನ್​ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net