ಯಾದಗಿರಿ: ಕ್ರೀಡೆಗಳಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಸೋಲೆ ಗೆಲುವಿನ ಮೆಟ್ಟಿಲು ಎಂದು ಭಾವಿಸಿ ಆಟಗಳನ್ನು ಆಡಬೇಕೆಂದು ಬಿಜೆಪಿ ಹಿರಿಯ ದುರೀಣ ರಾಚಣ್ಣಗೌಡ ಮುದ್ನಾಳ ಹೇಳಿದರು.ಇಲ್ಲಿನ ಲಯನ್ಸ್ ಕಬ್ಲ್ನ ಆಶ್ರಯದಲ್ಲಿ ಭಾನುವಾರ ಸಚಿನ್ ಕ್ಯಾತನಾಳ್ ಜನುಮ ದಿನದ ನಿಮಿತ್ಯ ಆಯೋಜಿಸಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಇಂದು ಕ್ರೀಡೆಗಳಿಗೆ ಮಹತ್ವ ಹೆಚ್ಚಾಗಿದ್ದು, ಪಠ್ಯದೊಂದಿಗೆ ಕ್ರೀಡೆಯಲ್ಲಿ ಆಸಕ್ತಿವಹಿಸಿ ಸಾಧನೆ ಮಾಡಬೇಕೆಂದರು. ಲಯನ್ಸ್ ಕಬ್ಲ್ನ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ ಮಾತನಾಡಿ, ಕಬ್ಲ್ನ ಆಶ್ರಯದಲ್ಲಿ ಇಂತಹ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.ಡಾ.ಸಿ.ಎಂ.ಪಾಟೀಲ್, ವೈ.ಪ್ರಸಾದ, ಡಾ.ಶಿವಪುತ್ರಪ್ಪ, ವೆಂಕಟರೆಡ್ಡಿ ತಂಗಡಗಿ ಸೇರಿದಂತೆಯೇ ಇತರರಿದ್ದರು. ಕ್ರೀಡಾಕೂಟದಲ್ಲಿ ಭಾಗಹಿಸಿ ಗೆದ್ದ ಆಟಗಾರರಿಗೆ ಕ್ರೀಡಾ ಸಾಮಾಗ್ರಿಗಳ ಕಿಟ್ ಮತ್ತು ನಗದು ಬಹುಮಾನ ವಿತರಿಸಲಾಯಿತು.