ಸೋಲು ಗೆಲುವು ಸಮನಾಗಿ ಸ್ವೀಕರಿಸಿ

ಯಾದಗಿರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾಫ್ಟ್​ ಬಾಲ್​ ಕ್ರಿಕೆಟ್​ ಟೂರ್ನಮೆಂಟ್​ಗೆ ಮೌಲಾಲಿ ಅನಪುರ ಚಾಲನೆ ನೀಡಿದರು. ಹಣುಮೇಗೌಡ  ಬೀರನಕಲ್​,ಅಶೋಕ ವಾಟಕರ, ಇಮಾಮ್​.ಜಿ, ನರೇಂದ್ರ ಗಾಂಧಿ, ಅನೀಲ ಗಾಂಧಿ, ಕಾಂತಪ್ಪ ಬಾಗ್ಲಿ ಇತರರಿದ್ದರು
ಯಾದಗಿರಿಯಲ್ಲಿ ಭಾನುವಾರ ಆಯೋಜಿಸಿದ್ದ ಸಾಫ್ಟ್​ ಬಾಲ್​ ಕ್ರಿಕೆಟ್​ ಟೂರ್ನಮೆಂಟ್​ಗೆ ಮೌಲಾಲಿ ಅನಪುರ ಚಾಲನೆ ನೀಡಿದರು. ಹಣುಮೇಗೌಡ ಬೀರನಕಲ್​,ಅಶೋಕ ವಾಟಕರ, ಇಮಾಮ್​.ಜಿ, ನರೇಂದ್ರ ಗಾಂಧಿ, ಅನೀಲ ಗಾಂಧಿ, ಕಾಂತಪ್ಪ ಬಾಗ್ಲಿ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀದೇವಿ ಟ್ರಸ್ಟ್​ ಮುಖ್ಯಸ್ಥ ಮೌಲಾಲಿ ಅನಪುರ ಸಲಹೆ
  • ಕ್ರಿಕೆಟ್​ ಪಂದ್ಯಾವಳಿಗೆ ಚಾಲನೆ
ಯಾದಗಿರಿ: ಕ್ರೀಡಾಪಟುಗಳು ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಿ.ಆದರೆ, ಪಂದ್ಯಗಳಲ್ಲಿ ಸೋಲು&ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಶ್ರೀದೇವಿ ಟ್ರಸ್ಟ್​ ಮುಖ್ಯಸ್ಥ ಮೌಲಾಲಿ ಅನಪುರ ಹೇಳಿದರು.
ಗಂಜ್​ ಪ್ರದೇಶದ ಅನಪುರ ಲೇಔಟ್​ನ ಎಂಎಸ್​ಎ ಶಾಲೆ ಮೈದಾನದಲ್ಲಿ ಶ್ರೀದೇವಿ ಟ್ರಸ್ಟ್​ ಹಾಗೂ ಎಂಎಸ್​ಎ ಆಂಗ್ಲ ಮಾಧ್ಯಮ ಪಬ್ಲಿಕ್​ ಶಾಲೆ ಸಹಯೋಗದಡಿ ಭಾನುವಾರ ಹಮ್ಮಿಕೊಂಡಿದ್ದ ಸಾಫ್ಟ್​ ಬಾಲ್​ ಕ್ರಿಕೆಟ್​ ಟೂರ್ನಮೆಂಟ್​ಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಪಟುಗಳು ಕ್ರೀಡಾ ಮನೋಭಾವನೆ ಮೆರೆಯಬೇಕು.ಜೀವನದಲ್ಲಿ ಕ್ರೀಡೆಗಳು ಬಹು ಮುಖ್ಯ. ಕ್ರೀಡೆಗಳಿಂದ ಮಾನಸಿಕ ಆರೋಗ್ಯ ಜತೆ ದೈಹಿಕವಾಗಿ ಸದೃಢರಾಗಿರಲು ಅನುಕೂಲವಾಗುತ್ತದೆ ಎಂದರು.
ಅಹಿಂದ ನಾಯಕ ಹಣುಮೇಗೌಡ ಬೀರನಕಲ್​ ಮಾತನಾಡಿ, ಮನುಷ್ಯ ಆರೋಗ್ಯವಂತನಾಗಿರಲು ಆಟ, ವ್ಯಾಯಾಮಗಳಲ್ಲಿ ಹಾಗೂ ಪ್ರತಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ.ಮುಖ್ಯವಾಗಿ ಕ್ರೀಡಾಪಟುಗಳು ಕ್ರೀಡೆಗಳ ರ್ನಿಣಯಗಳನ್ನು ಪಾಲಿಸುವುದರೊಂದಿಗೆ ಕ್ರೀಡಾ ಸ್ಫೂರ್ತಿ ಹೊಂದಬೇಕು ಎಂದು ತಿಳಿಸಿದರು.
ಪ್ರಮುಖರಾದ ವಿಜಯಕುಮಾರ ಶಿರಗೋಳ,ಅಶೋಕ ವಾಟಕರ, ಇಮಾಮ್​.ಜಿ, ನರೇಂದ್ರ ಗಾಂಧಿ, ಅನೀಲ ಗಾಂಧಿ, ಕಾಂತಪ್ಪ ಬಾಗ್ಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net