ಕುರಕುಂದಾ, ಕಾಡಂಗೇರಾ(ಬಿ) ಸೇರಿ ವಿವಿಧ ಗ್ರಾಮಗಳಲ್ಲಿ ರೈತರು ಮುಂಗಾರು ಹಂಗಾಮು ಬಿತ್ತನೆಗೆ ಚಾಲನೆ ನೀಡಿದ್ದಾರೆ. ಕಳೆದ 2&3 ದಿನಗಳ ಹಿಂದೆ ಬೆಳಗ್ಗೆ ಸುರಿದ ಮಳೆಗೆ ಜಮೀನುಗಳಲ್ಲಿ ಅಲ್ಪಸ್ವಲ್ಪ ತೇವಾಂಶವಾಗಿದ್ದ ಕಾರಣ ರೈತರು ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಹತ್ತಿ, ತೊಗರಿ ಬಿತ್ತನೆಗೆ ಮುಂದಾಗಿದ್ದಾರೆ ಎಂದು ಖಾನಾಪುರ ಗ್ರಾಮದ ರೈತ ಭೀಮರಾಯ ಉಳ್ಳೆಸುಗೂರ ತಿಳಿಸಿದ್ದಾರೆ.