ಜನಿಸಿದ ಐದನೆ ದಿನವೇ ಆಧಾರ್​ ನೋದಂಣಿ: ಅಂತಾರಾಷ್ಟ್ರೀಯ ದಾಖಲೆ ಬರೆದ ಕೊಪ್ಪಳದ ಕಂದಮ್ಮ! Aadhaar Registration

ಜನಿಸಿದ ಕೇವಲ 5 ದಿನಗಳಲ್ಲೇ ಮಗುವಿನ ಆಧಾರ್ ನೋಂದಣಿ
ಜನಿಸಿದ ಕೇವಲ 5 ದಿನಗಳಲ್ಲೇ ಮಗುವಿನ ಆಧಾರ್ ನೋಂದಣಿ
Published on

ಪ್ರಮುಖ ಮುಖ್ಯಾಂಶಗಳು

  • ಕೊಪ್ಪಳದಲ್ಲಿ ಜನಿಸಿದ ಕೇವಲ 5 ದಿನಗಳಲ್ಲೇ ಮಗುವಿನ ಆಧಾರ್ ನೋಂದಣಿ
  • ಅಂತಾರಾಷ್ಟ್ರೀಯ ದಾಖಲೆ ಬರೆದ ಕಂದಮ್ಮ
ಕೊಪ್ಪಳ: ಭೂಮಿಗೆ ಕಾಲಿಟ್ಟ ಕೇವಲ ಐದೇ ಐದು ದಿನಗಳಲ್ಲಿ ಆಧಾರ್​ ನೋಂದಣಿ (Aadhaar Registration) ಮಾಡುವ ಮೂಲಕ, ಕೊಪ್ಪಳದ, ಗಂಗಾವತಿಯ ವೈದ್ಯ ದಂಪತಿಗಳ ಪುತ್ರಿ ಅಂಚುರಿ ರೇಯಂಕಾ ತ್ರಿನಯನಿ ಅಂತಾರಾಷ್ಟ್ರೀಯ ದಾಖಲೆಯನ್ನು ಮಾಡಿದ್ದಾಳೆ.
ಮೇ. 1, 2026 ರಂದು ಜನಿಸಿದ ಈ ಮಗು ಮೇ. 6 ರಂದು ತನ್ನ ಆಧಾರ್​ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅತ್ಯಂತ ಕಿರಿ ವಯಸ್ಸಿನ ಆಧಾರ್​​ ನೋದಂಣಿ ಹೊಂದಿರುವ ದಾಖಲೆ ಈ ಕಂದಮ್ಮನ ಹೆಸರಿನಲ್ಲಿ ದಾಖಲಾಗಿದೆ.

5 ದಿನಗಳಲ್ಲಿ ಆಧಾರ್​ ನೋಂದಣಿ!

ಮೇ. 1 ರಂದು ಗಂಗಾವತಿಯ ವಿವೇಕಾನಂದ ಆಸ್ಪತ್ರೆಯಲ್ಲಿ ಜನಿಸಿದ್ದ ಅಂಚುರಿಯ ಆಧಾರ್ ನೋಂದಣಿಯನ್ನು ಆಕೆಯ ಪಾಲಕರಾದ, ಡಾ. ಎ. ಪವನ್ ಕುಮಾರ್ ಮತ್ತು ಡಾ. ವರಲಕ್ಷ್ಮಿ ಪಾಲ್ ಕೇವಲ ಐದೇ ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ಈ ದಾಖಲೆಯನ್ನು ನಿರ್ಮಿಸಿದ್ದಾರೆ.

ಹೀಗಾಗಿ ಹುಟ್ಟಿದ ಅತ್ಯಂತ ಕಡಿಮೆ ದಿನಗಳಲ್ಲಿ ಆಧಾರ್​ ನೋಂದಣಿ ಮಾಡಿಸಿದ ದಾಖಲೆ ಈಗ ಗಂಗಾವತಿಯ, ಶ್ರೀರಾಮನಗರದ ನಿವಾಸಿ ಅಂಚುರಿ ರೇಯಂಕಾ ತ್ರಿನಯನಿ ಎಂಬ ಮಗುವಿನ ಹೆಸರಲ್ಲಿ ದಾಖಲಾಗಿದೆ.


ಈ ಕಂದಮ್ಮಳ ದಾಖಲೆಯನ್ನು ಗಮನಿಸಿ, ಅಂತಾರಾಷ್ಟ್ರೀಯ ಬುಕ್​ ಆಫ್​ ರೆಕಾರ್ಡ್ಸ್​ ಅವರು ಪ್ರಮಾಣಪತ್ರ ಹಾಗೂ ಪದಕವೊಂದನ್ನು ನೀಡಿ ಗೌರವಿಸಿದ್ದಾರೆ. ಹುಟ್ಟಿದ ಐದೇ ದಿನಕ್ಕೆ ಅಂತಾರಾಷ್ಟ್ರೀಯ ದಾಖಲೆಯನ್ನು ಮಾಡುವ ಮೂಲಕ ಈ ಕಂದಮ್ಮ ಈಗ ಸೋಷಿಯಲ್​ ಮೀಡಿಯಾನಲ್ಲಿ ಎಲ್ಲೆಡೆ ವೈರಲ್​ ಆಗುತ್ತಿದ್ದಾಳೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net