ಬೆಂಗಳೂರು: ಕ್ರಿಯೆಟಿವ್ ಥಿಯೇಟರ್ ತಂಡ ಗುರುವಾರ (ಜು. 9) ರಾತ್ರಿ 7.30ಕ್ಕೆ ಜೆ.ಪಿ.ನಗರ 2ನೇ ಹಂತದಲ್ಲಿರುವ ರಂಗಶಂಕರದಲ್ಲಿ ‘ಆದದ್ದೆಲ್ಲಾ ಒಳಿತೇ..?’ ಹಾಸ್ಯ ನಾಟಕದ 97ನೇ ಪ್ರದರ್ಶನ ಆಯೋಜಿಸಿದೆ. ಟಿ. ಸುನಂದಮ್ಮ ಅವರ ಬರಹದಿಂದ ಪ್ರೇರಿತವಾದ ಈ ನಾಟಕಕ್ಕೆ ನಟ ಸುಂದರ್ ರಂಗರೂಪ ನೀಡಿದ್ದು, ಪ್ರಮೋದ್ ಶಿಗ್ಗಾಂವ್ ನಿರ್ದೇಶನವಿರಲಿದೆ. ಸಾಹಿತಿ ಡಾ. ಕೆ.ವೈ. ನಾರಾಯಣಸ್ವಾಮಿ ಗೀತೆಗಳನ್ನು ರಚಿಸಿದ್ದು, ಗಜಾನನ ಟಿ. ನಾಯಕ ಸಂಗೀತದಲ್ಲಿ ಗಾಯಕಿ ಎಂ.ಡಿ. ಪಲ್ಲವಿ ಮತ್ತು ತಂಡದವರ ಗಾಯನವಿರಲಿದೆ. ಕಲಾವಿದರಾದ ಲಕ್ಷ್ಮೀ ಚಂದ್ರಶೇಖರ್, ಸುಂದರ್, ಸೌಮ್ಯ ಗಂಗಟಕರ್ ಅಭಿನಯವಿರಲಿದೆ.