ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

ಕಲಬುರಗಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಉಪನ್ಯಾಸಕರು&ಶಿಕ್ಷಕರನ್ನು ಸತ್ಕರಿಸಲಾಯಿತು. ಎಂಎಲ್ಸಿ ಶಶೀಲ್​ ನಮೋಶಿ, ವಿಜಯಕುಮಾರ ತೇಗಲತಿಪ್ಪಿ, ಬಸವರಾಜ ಬಳೂಂಡಗಿ, ಮಹೇಶ ಹೂಗಾರ, ಶಿವಲೀಲಾ ಕಲಗುರ್ಕಿ, ಧರ್ಮಣ್ಣ ಧನ್ನಿ, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಶಿವರಾಜ ಅಂಡಗಿ ಇತರರಿದ್ದರು.
ಕಲಬುರಗಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಉಪನ್ಯಾಸಕರು&ಶಿಕ್ಷಕರನ್ನು ಸತ್ಕರಿಸಲಾಯಿತು. ಎಂಎಲ್ಸಿ ಶಶೀಲ್​ ನಮೋಶಿ, ವಿಜಯಕುಮಾರ ತೇಗಲತಿಪ್ಪಿ, ಬಸವರಾಜ ಬಳೂಂಡಗಿ, ಮಹೇಶ ಹೂಗಾರ, ಶಿವಲೀಲಾ ಕಲಗುರ್ಕಿ, ಧರ್ಮಣ್ಣ ಧನ್ನಿ, ಸೈಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ, ಶಿವರಾಜ ಅಂಡಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್​ ಸದಸ್ಯ ನಮೋಶಿ ಭರವಸೆ
  • ಕಸಾಪದ ಅಭಿನಂದನಾ ಸಮಾರಂಭದಲ್ಲಿ ಶಿಕ್ಷಕ-ಉಪನ್ಯಾಸಕರಿಗೆ ಸತ್ಕಾರದ
ಕಲಬುರಗಿ: ಶಿಕ್ಷಕರ ಜ್ವಲಂತ ಸಮಸ್ಯೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಇದರ ಪರಿಹಾರಕ್ಕಾಗಿ ಸದನದ ಒಳ ಹಾಗೂ ಹೊರಗೆ ಹಂತ ಹಂತದ ಹೋರಾಟ ಮಾಡಲಾಗುತ್ತಿದೆ. ಶೀಘ್ರದಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ ಭರವಸೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕಾ ಘಟಕದ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಚುನಾಯಿತರಾದ ಪದಾಧಿಕಾರಿಗಳ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಎಲ್ಲರನ್ನು ಒಟ್ಟುಗೂಡಿಸಿ ಕನ್ನಡ ಕಟ್ಟುವ ಕೆಲಸ ನಿಜಕ್ಕೂ ಮಾದರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಶಾಲೆ ಎಂಬ ನಾಲ್ಕು ಗೋಡೆಗಳ ಮಧ್ಯದಲ್ಲಿ ದೇಶದ ಭವಿಷ್ಯ ನಿರ್ಮಿಸುವ ಕಾರ್ಯ ಶಿಕ್ಷಕರು ಮಾಡುತ್ತಿರುತ್ತಾರೆ. ಅವರ ಸೇವೆ ಸದಾ ಕಾಲ ಸ್ಮರಿಸುತ್ತಾ, ಪರಿಷತ್ತಿಗೆ ಶಿಕ್ಷಕರೇ ದೊಡ್ಡ ಬಲವಾಗಿದ್ದಾರೆ. ಶಿಕ್ಷಕರು ನಿತ್ಯವೂ ಸಾಹಿತಿಗಳಾಗಿರುತ್ತಾರೆ. ಹೀಗಾಗಿ ಅವರಿಗಾಗಿಯೇ ಒಂದು ವಿಶೇಷ ಶಿಕ್ಷಕ ಸಾಹಿತ್ಯ ಸಮ್ಮೇಳನವನ್ನು ಜುಲೈನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಜಿಲ್ಲಾ ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂದ ಅಧ್ಯಕ್ಷ ಮಹೇಶ ಹೂಗಾರ, ಸರ್ಕಾರಿ ನೌಕರರ ಸಂದ ರಾಜ್ಯ ಪರಿಷತ್​ ಸದಸ್ಯ ಧರ್ಮರಾಜ ಜವಳಿ, ಕಸಾಪ ತಾಲೂಕಾಧ್ಯೆ ಶಿವಲೀಲಾ ಕಲಗುರ್ಕಿ, ಕೇಂದ್ರ ಕಸಾಪ ಪ್ರತಿನಿಧಿ ಸ್ಯೆಯ್ಯದ್​ ನಜಿರುದ್ದಿನ್​ ಮುತ್ತವಲ್ಲಿ ಮಾತನಾಡಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಭುವನೇಶ್ವರಿ ಹಳ್ಳಿಖೇಡ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಜ್ಯೋತಿ ಕೋಟನೂರ, ಶ್ವೇತಾ ಪಾಟೀಲ, ವಿಶಾಲಾ ಮಾಯಣ್ಣವರ್​, ದಿನೇಶ ಮದಕರಿ, ಶಿವಾನಂದ ಸುರವಸೆ, ಚಂದ್ರಕಾಂತ ಏರಿ, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಮಹೇಶ ಚಿಂತನಪಳ್ಳಿ, ಬಂಗಾರೆಪ್ಪಾ ಇತರರಿದ್ದರು.
ಎಸ್​.ಬಿ.ಪಾಟೀಲ ಗ್ರೂಪ್​ ಎಂಬ ಉದ್ಯಮಲೋಕ ಕಟ್ಟಿದ ದಿ.ಗಳಂಗಳಪ್ಪ ಪಾಟೀಲರ ಪತ್ನಿ ಮಾತೋಶ್ರೀ ವೀರಮ್ಮ ಗಳಂಗಳಪ್ಪ ಪಾಟೀಲ ಅಗಲಿಕೆಗೆ ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
"

ಹಳೆ ಪಿಂಚಣಿ ಜಾರಿ ಕುರಿತಾಗಿ ಅನೇಕ ಬಾರಿ ಸರ್ಕಾರದ ಗಮನ ಸೆಳೆದರೂ ಪರಿಹಾರ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಗಟ್ಟಿ ಧ್ವನಿ ಎತ್ತುವ ಮೂಲಕ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

— ಶಶೀಲ್​ ನಮೋಶಿ, ವಿಧಾನ ಪರಿಷತ್​ ಸದಸ್ಯ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net