ನೀರಿಗಾಗಿ ಜನಾಂದೋಲನ ಅಗತ್ಯ

 ಅಫಜಲಪುರ ತಾಲೂಕಿನ ಅರ್ಜುಣಗಿಯಲ್ಲಿ ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಸಾಥ್​ ನೀಡಿದರು
ಅಫಜಲಪುರ ತಾಲೂಕಿನ ಅರ್ಜುಣಗಿಯಲ್ಲಿ ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಸಾಥ್​ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿಕೆ
  • ಅರ್ಜುಣಗಿಯಲ್ಲಿ ಧರಣಿ 3ನೇ ದಿನಕ್ಕೆ
ಅಫಜಲಪುರ: ಬೋರಿ ನದಿಯಿಂದ ತಾಲೂಕಿನ 10 ಹಾಗೂ ಆಳಂದ ತಾಲೂಕಿನ 3 ಕೆರೆ, ಅಮರ್ಜಾ ಅಣೆಕಟ್ಟಿಗೆ ನೀರು ತುಂಬುವ ಜೀವಜಲ ಯೋಜನೆಯ ಪೈಪ್​ಲೈನ್​ ಹಾಳು ಮಾಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ದುಷತ್ಯ ಖಂಡಿಸಿ ಹಾಗೂ ಪೈಪ್​ಲೈನ್​ ದುರಸ್ತಿಗೆ ಆಗ್ರಹಿಸಿ ಕಲಬುರಗಿ-ಬೀದರ್​ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ನಡೆಯುತ್ತಿರುವ ನೀರಿಗಾಗಿ ಧರಣಿ ಶುಕ್ರವಾರ 2 ದಿನ ಪೂರ್ಣಗೊಳಿಸಿದ್ದು, 3ನೇ ದಿನಕ್ಕೆ ಪದಾರ್ಪಣೆ ಮಾಡಿದೆ.
ಕಡಗಂಚಿ ಶ್ರೀ ವೀರಭದ್ರ ಶಿವಾಚಾರ್ಯರು ಧರಣಿಗೆ ಸಾಥ್​ ನೀಡಿ ಮಾತನಾಡಿ, ನೀರು ಪ್ರತಿಯೊಂದು ಜೀವಿಯ ಬದುಕಿನ ಮೂಲಾಧರವಾಗಿದೆ. ಆರ್​.ಕೆ.ಪಾಟೀಲ್​ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹವು ಎಲ್ಲರ ಬದುಕಿನ ಭರವಸೆಯಾಗಿದೆ. ಇದೊಂದು ಜನಾಂದೋಲನದ ಹೋರಾಟವಾಗಿದೆ ಎಂದು ಹೇಳಿದರು.
ಶ್ರೀ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ಮುರಾಹರಿ ಮಹಾರಾಜ, ಶ್ರೀ ಪಂಪಾಪತಿ ಶಿವಾಚಾರ್ಯ, ಶ್ರೀ ಬಳಿರಾಮ ಮಹಾರಾಜರು, ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​, ಕೆಎಂಎಫ್​ ನಿರ್ದೇಶಕ ಬಸವರಾಜ ಉಪ್ಪಿನ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ಅಶೋಕ ಸವಳೇಶ್ವರ, ಜಿಪಂ ಮಾಜಿ ಸದಸ್ಯರಾದ ಮತೀನ್​ ಪಟೇಲ್​, ಸಿದ್ಧರಾಮ ಪ್ಯಾಟಿ, ಗುರುಶರಣ ಕೋರಳ್ಳಿ, ಮಜರ್​ ಹುಸೇನ್​, ಪಾಶಾ, ಪ್ರಮುಖರಾದ ಗುರುಲಿಂಗ ಜಂಗಮ, ಗುರುಶಾಂತಪ್ಪ ಪಾಟೀಲ್​ ನಿಂಬಾಳ, ಸಿದ್ದರಾಮ ಪ್ಯಾಟಿ, ಪಿದೋರ್ಸ್​ ಅನ್ಸಾರಿ, ಶರಣಬಸಪ್ಪ ವಾಗೆ, ರಾಜು ಯಂಕಂಚಿ, ಬಸವರಾಜ ಉಪ್ಪಿನ್​, ಪ್ರಕಾಶ ಶಿಂಧೆ, ಶರಣಬಸಪ್ಪ ಕಲಶೆಟ್ಟಿ, ಬಸವರಾಜ ಕೌಲಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net