ಶುಭ ಚಿಂತನೆಯಿಂದ ನೆಮ್ಮದಿ ಬದುಕು

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಶ್ರೀಮಠದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ತುಲಾಭಾರ ಸಮಾರಂಭವನ್ನು ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ಬಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ, ಪಿ.ಕೆ.ಹಿರೇಮಠ, ಚಂದ್ರರಾಜ ಎಸ್​. ಹಂಜಿಗೆ, ಸಂತೋಷ ಪಾಟೀಲ, ರಾಜಕುಮಾರ ಹಂಜಿಗೆ, ಸಂಗಣ್ಣ ಪಾಟೀಲ, ಚನ್ನವಿರ ಚಿಟ್ಟೆ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಡಾ.ಚನ್ನವಿರ ಶಿವಾಚಾರ್ಯ ನುಡಿ
  • ರಕೂಡದಲ್ಲಿ ಗುರುವಂದನೆ ಕಾರ್ಯಕ್ರಮ
ಬಸವಕಲ್ಯಾಣ: ಶ್ರಾವಣ ಮಾಸ ಶುಭ ಚಿಂತನೆಗೆ ಪರ್ವ ಕಾಲವಾಗಿದ್ದು ಶುಭ ಚಿಂತನೆಯಿಂದ ಮನಸ್ಸಿನಲ್ಲಿ ಸಾತ್ವಿಕ ಅಲೆಗಳು ಹುಟ್ಟಿ, ಮಾಡುವ ಕಾರ್ಯಗಳೂ ಫಲಪ್ರದಗೊಂಡು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗುರುವಿನ ಸಾನಿಧ್ಯದಿಂದ ಮನಸ್ಸು ತಿಳಿಗೊಂಡು ನಡೆ-ನುಡಿ ಒಂದಾಗಿ ಮಾಡುವ ಕಾರ್ಯಗಳೆಲ್ಲವೂ ಕಾಯಕದ ಸ್ಪರ್ಶಕ್ಕೆ ಒಳಪಡುತ್ತವೆ. ಇದರಿಂದ ಮನುಷ್ಯ ಸತ್ಕರ್ಮಿಯಾಗಿ ಸಮಾಜದಲ್ಲಿ ಸದ್ಭಾವದ ಮಾಧುರ್ಯ ಉಂಟಾಗಿ ಎಲ್ಲರೂ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುವಂತಾಗುತ್ತದೆ ಎಂದರು.
ಜಿಪಂ ನಿವೃತ್ತ ಉಪಕಾರ್ಯದರ್ಶಿ ಬಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ, ಪಿ.ಕೆ.ಹಿರೇಮಠ, ಸಂತೋಷ ಪಾಟೀಲ, ರಾಜಕುಮಾರ ಹಂಜಿಗೆ, ಸಂಗಣ್ಣ ಪಾಟೀಲ, ಚನ್ನವಿರ ಚಿಟ್ಟೆ, ರಾಜಕುಮಾರ ಘಾಳೆ, ಶಿವಶರಣಯ್ಯ ಕಂಬಳಿಮಠ ಇದ್ದರು. ಚಂದ್ರರಾಜ ಹಂಜಿಗೆ ಸ್ವಾಗತಿಸಿದರು. ಶಿವಾನಂದ ಮಳಗಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ಹಾಡಿದರು. ಚಂದ್ರರಾಜ ಹಂಜಿಗೆ ಪಾರಿವಾರದವರು ಹಾರಕೂಡ ಶ್ರೀಗಳ 1026ನೇ ತುಲಾಭಾರ ಮಾಡಿ ಆಶೀರ್ವಾದ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net