ಅದ್ದೂರಿ ಬಸವ ಜಯಂತಿ ಆಚರಣೆ 29ಕ್ಕೆ

ಹುಮನಾಬಾದ್​ನ  ಹಿರೇಮಠ ಸಂಸ್ಥಾನದಲ್ಲಿ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ನೇತೃತ್ವದಲ್ಲಿ  ಬಸವ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಅಭಿಷೇಕ ಪಾಟೀಲ್​, ಸಂತೋಷ ಪಾಟೀಲ್​ ಹಾಗೂ ಸಮಾಜದ ಪ್ರಮುಖರು ಇದ್ದರು.
ಹುಮನಾಬಾದ್​ನ ಹಿರೇಮಠ ಸಂಸ್ಥಾನದಲ್ಲಿ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ನೇತೃತ್ವದಲ್ಲಿ ಬಸವ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಅಭಿಷೇಕ ಪಾಟೀಲ್​, ಸಂತೋಷ ಪಾಟೀಲ್​ ಹಾಗೂ ಸಮಾಜದ ಪ್ರಮುಖರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹುಮನಾಬಾದ್​ನಲ್ಲಿ ಪೂರ್ವ ಸಿದ್ಧತಾ ಸಭೆ
ಹುಮನಾಬಾದ್​: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಗುರುವಾರ ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ನೇತೃತ್ವದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಏ.29ರಂದು ಅದ್ದೂರಿ ಯಂತಿ ಆಚರಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯರಾಗಿ ಬೀದರ ಡಿಸಿಸಿ ಬ್ಯಾಂಕ್​ ಉಪಾಧ್ಯ ಅಭಿಷೇಕ ಪಾಟೀಲ್​ ಹಾಗೂ ಗೌರವ ಅಧ್ಯರಾಗಿ ಪುರಸಭೆ ಮಾಜಿ ಸದಸ್ಯ ಸುನೀಲ್​ ಪಾಟೀಲ್​ ಅವರನ್ನು ಆಯ್ಕೆ ಮಾಡಲಾಯಿತು.
ಶ್ರೀ ವೀರ ರೇಣುಕ ಗಂಗಾಧರ ಶಿವಾಚಾರ್ಯ ಮಾತನಾಡಿ, ಬಸವ ಜಯಂತಿಕೇವಲ ಆಚರಣೆಯಾಗಿ ಉಳಿಯದೆ, ಬಸವಾದಿ ಶರಣರ ತತ್ವಾದರ್ಶಗಳೊಂದಿಗೆ ಸಮಾಜದಲ್ಲಿ ಏಕತೆ ಮತ್ತು ಸಮಾನತೆಯನ್ನು ಸಾರುವ ಹಬ್ಬವಾಗಬೇಕು. ಎಲ್ಲ ಸಮುದಾಯದ ಜನರನ್ನು ಒಂದಾಗಿ ಸೇರಿಸುವ ಕಾರ್ಯ ಈ ಕಾರ್ಯಕ್ರಮದ ಮೂಲಕ ನಡೆಯಬೇಕು. ನಿಗದಿತ ದಿನದಂದೇ ಜಯಂತಿ ಆಚರಣೆ ನಡೆಸಿದರೆ ಅದರ ಮಹತ್ವ ಹೆಚ್ಚುತ್ತದೆ ಎಂದರು.
ಏ.29ರಂದು ಸಂಜೆ 5ಕ್ಕೆ ಥೇರ್​ ಮೈದಾನದಿಂದ ಬಸವೇಶ್ವರ ವೃತ್ತದವರೆಗೆ ಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಬಳಿಕ ಬಸವೇಶ್ವರ ವೃತ್ತದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಿ, ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದಾದ ನಂತರ ಖ್ಯಾತ ಹಾಸ್ಯ ಕಲಾವಿದರು ಹಾಗೂ ಸಂಗೀತ ಕಲಾವಿದರಿಂದ ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಭೆಯಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ಬಾಬುರಾವ ಪೋಚಂಪಳ್ಳಿ, ಬಸವ ಸೇವಾ ಪ್ರತಿಷ್ಠಾನದ ಸೋಮಯ್ಯ ಮಠಪತಿ, ಪಿಎಲ್​ಡಿ ಬ್ಯಾಂಕ್​ ಅಧ್ಯ ಮಲ್ಲಿಕಾರ್ಜುನ ಮಾಶೆಟ್ಟಿ, ಯುವ ಮುಖಂಡ ಸಂತೋಷ ಪಾಟೀಲ್​, ಮಲ್ಲಿಕಾರ್ಜುನ ಸೀಗಿ, ಶ್ರೀನಾಥ ದೇವಣಿ, ಮಹೇಶ ಅಗಡಿ, ರವಿ ಮಾಡಗಿ, ಉಮೇಶ ಜಮಗಿ, ಹುಲ್ಲಿಪ್ಪ ದೇವಣಿ, ಜಗದೀಶ ಭಾವಿ, ಸಚ್ಚಿದಾನಂದ ಮಠಪತಿ, ರಮೇಶ ಕಲ್ಲೂರು, ಮಲ್ಲಿಕಾರ್ಜುನ ಗಡ್ಡಲ್​, ಮಹಾತೇಂಶ ಪೂಜಾರಿ, ಮಲ್ಲಿಕಾರ್ಜುನ ಮರೂರ, ಗುರು ಸೇರಿ ಸಮಾಜದ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net