

ಸೇಡಂ: ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಗಳು ಸಾಮಾನ್ಯ, ಅದಕ್ಕೆ ತಲೆಕೆಡಿಸಿಕೊಳ್ಳದೆ ಛಲದಿಂದ ಬದುಕು ನಡೆಸಿದಾಗ ಸಾಧನೆ ಸಾಧ್ಯ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು. ಪೊಲೀಸ್ ಪಾಟೀಲ್ ಬಡಾವಣೆಯಲ್ಲಿ ಶ್ರಾವಣ ನಿಮಿತ್ತ ಗುರುವಾರ ಆಯೋಜಿಸಲಾಗಿದ್ದ ಮಾನವ ಬದುಕಿನ ಸೋಪಾನ ಸತ್ಸಂಗ ಉದ್ಘಾಟಿಸಿ ಆಶೀರ್ವಚನ ನೀಡಿ, ಜೀವನದಲ್ಲಿ ಗುರುವಿನ ಮಾರ್ಗದರ್ಶನ ಸೂಕ್ತ ಸಮಯದಲ್ಲಿ ಪಡೆದರೆ ಯಶಸ್ಸಿಗೆ ಸ್ಫೂರ್ತಿ ತರುತ್ತದೆ. ಹಿಂದೆ ಗುರು-, ಮುಂದೆ ಗುರಿಯಿರಬೇಕು ಎಂದರು. ಹಿರಿಯ ಸಾಹಿತಿ ಲಿಂಗಾರೆಡ್ಡಿ ಶೇರಿ ಮಾತನಾಡಿ, ಉತ್ತಮ ಸಂಸ್ಕಾರ ಮತ್ತು ಓದಿನ ಪರಂಪರೆ ಬೆಳೆಸಬೇಕಿದೆ ಎಂದು ತಿಳಿಸಿದರು. ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿದರು. ವೀರಶೈವ ಲಿಂಗಾಯತ ಶೈಕ್ಷಣಿಕ ಹಾಗೂ ಕಲ್ಯಾಣ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಶರಣಬಸಪ್ಪ ಹಾಗರಗಿ, ಪ್ರಮುಖರಾದ ವೀರಭದ್ರಯ್ಯಸ್ವಾಮಿ ರುದ್ನೂರ, ಮುರುಗೆಪ್ಪ ಕೊಳಕೂರ, ಬಸವರಾಜ ಹಲಚೇರಿ, ಬಸವರಾಜ ರುದ್ನೂರ, ಮುರಿಗೆಣ್ಣ ಭೂಮಾ, ಶರಣಬಸಪ್ಪ ನೀಲಂಗಿ, ದೇವಿಂದ್ರಪ್ಪ ಮೇಳಕುಂದಿ, ಜಗನ್ನಾಥ ಕಿರಣಗಿ, ವೆಂಕಟೇಶ ಸಕ್ರಿ, ಸಂಗಮೇಶ ಹತ್ತಿ, ಮಂಜುನಾಥ ಮಠಪತಿ ಇದ್ದರು. ಬಸವರಾಜ ಬಾಳಿ ಸ್ವಾಗತಿಸಿದರು. ರಾಚಣ್ಣ ಬಳಗಾರ ನಿರೂಪಣೆ ಮಾಡಿದರು. ಅವಿನಾಶ ಬೋರಂಚಿ ವಂದಿಸಿದರು.