ಐನೋಳ್ಳಿಯಲ್ಲಿ ಎತ್ತುಗಳ ಭವ್ಯ ಮೆರವಣಿಗೆ

ಚಿಂಚೋಳಿ ತಾಲೂಕಿನ ಐನೋಳ್ಳಿಯಲ್ಲಿ ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೂ ಮುನ್ನ ಗ್ರಾಮಸ್ಥರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.
ಚಿಂಚೋಳಿ ತಾಲೂಕಿನ ಐನೋಳ್ಳಿಯಲ್ಲಿ ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೂ ಮುನ್ನ ಗ್ರಾಮಸ್ಥರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.
Published on
ಚಿಂಚೋಳಿ: ಐನೋಳ್ಳಿಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೂ ಮುನ್ನ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ, ಎತ್ತುಗಳಿಗೆ ವಿಶೇಷ ಪೂಜೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಮೆರವಣಿಗೆ ನಡೆಸಲಾಯಿತು. ಐನೋಳ್ಳಿಯಲ್ಲಿ ಕೃಷಿ ಕಾರ್ಯ ಆರಂಭಕ್ಕೂ ಮುನ್ನ ದೇವರು ಹಾಗೂ ಕೃಷಿ ಪರಿಕರ, ಎತ್ತುಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಹೀಗಾಗಿ ಶುಕ್ರವಾರ ಬೆಳಗ್ಗೆ ಗ್ರಾಮ ದೇವತೆ ಹಾಗೂ ಅಗಸಿ ಬಂಡೆಗೆ ಪೂಜೆಯೊಂದಿಗೆ ನೈವೇದ್ಯ ಅರ್ಪಿಸಲಾಯಿತು. ಎತ್ತುಗಳನ್ನು ಸಿಂಗರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಉತ್ತಮ ಮಳೆಗಾಗಿ ಪ್ರಾರ್ಥಿಸಲಾಯಿತು. ಪ್ರಮುಖರಾದ ಹಣಮಂತ ಹಿರೇಮನಿ, ಬಕ್ಕಪ್ಪ ಗೌನಳ್ಳಿ, ಶಿವರಾಯ ಪುಣ್ಯಶೆಟ್ಟಿ, ಬಸವರಾಜ ಬೆಸ್ತಾ, ವಿಜಯಕುಮಾರ ಮಾಡಗಿ, ಲ್ಮಕಾಂತ ಕುಲಕರ್ಣಿ, ಗೌಸ್​ ಹೂಡಾ, ಪ್ರಭು ಬೋಯಿನ್​, ದೇವಿಂದ್ರ ಬೊಕ್ಕಲ, ಉದಯಕುಮಾರ ಬೆನಕಿನ್​, ರಾಜಕುಮಾರ ಸುಂಕಾ, ವಿಶಾಲ್​ ಬೆನಕಿನ್​, ಬಸವರಾಜ ನಿಂಬೂರ, ಅವಿನಾಶ ಜಾಡರ್​, ವಿಷ್ಣುಕಾಂತ ಮೂಲಗಿ, ಶಿವಯ್ಯಸ್ವಾಮಿ, ಜರಣಪ್ಪ ಗುಡಸುಲ, ಶಾಂತಪ್ಪ ಕನ್ನಾ, ಮಲ್ಲಪ್ಪ ನಾಟೀಕಾರ, ಲೋಕೇಶ ಐನೋಳ್ಳಿ, ವೀರಶೆಟ್ಟಿ, ಗುಂಡಪ್ಪ ಕನ್ನಾ, ನಾಗಪ್ಪ ಚಿಟ್ಟಾ, ದಿನೇಶ ದುಗ್ಗಾಣಿ, ಬಕ್ಕಪ್ಪ ಕಾಮಣಿ, ಗುಂಡಪ್ಪ ಕಾಮಣಿ ಇತರರಿದ್ದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net