ಗುಲ್ಬರ್ಗ ಜೆಸ್ಕಾಂನಲ್ಲಿ ಸೋಮವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತ ಸುವರ್ಣ ದಡೇದ್ ದಂಪತಿಯನ್ನು ಎಂಡಿ ಕೃಷ್ಣ ಬಾಜಪೇಯಿ ಸತ್ಕರಿಸಿದರು. ತಾಂತ್ರಿಕ ನಿರ್ದೇಶಕ ಚಂದ್ರಕಾಂತ ಪಾಟೀಲ್ ಇತರರಿದ್ದರು.
ಕಲಬುರಗಿ: ಸೇವಾವಧಿಯಲ್ಲಿ ತಾಂತ್ರಿಕ ನೈಪುಣ್ಯ, ಶಿಸ್ತು, ಪಾರದರ್ಶಕ ಆಡಳಿತ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಅನೇಕ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಇಂದು ನಿವೃತ್ತಿ ಹೊಂದಿದ ಜೆಸ್ಕಾಂ ಮುಖ್ಯ ಅಧೀಕ್ಷಕಿ ಸುವರ್ಣ ದಡೇದ್ ಯುವ ಇಂಜಿನಿಯರ್ಗಳಿಗೆ ಮಾದರಿಯಾಗಿದ್ದಾರೆ ಎಂದು ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಶ್ಲಾಸಿದರು.
ಜೆಸ್ಕಾಂ ಕಚೇರಿಯ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 34 ವರ್ಷ 5 ತಿಂಗಳ ಸುದೀರ್ ಅವಧಿ ಸಂಸ್ಥೆಗೆ ತಮ್ಮ ಾನ, ಶ್ರಮ, ನಿಷ್ಠೆ ಮತ್ತು ನಾಯಕತ್ವ ಅರ್ಪಿಸಿದ ಸುವರ್ಣ ಕೊಡುಗೆ ಅವಿಸ್ಮರಣೀಯ. ನಿವೃತ್ತಿ ಎಂದರೆ ಅಂತ್ಯವಲ್ಲ, ಹೊಸ ಅಧ್ಯಾಯದ ಆರಂಭ. ಮುಂದಿನ ಜೀವನದಲ್ಲಿ ಉತ್ತಮ ಆರೋಗ್ಯ, ಸಂತೋಷ, ಕುಟುಂಬದೊಂದಿಗೆ ಸುಖ&ಶಾಂತಿಯುತ ಜೀವನ ನಿಮ್ಮದಾಗಲಿ ಎಂದು ಹಾರೈಸಿದರು.
ಅಧ್ಯತೆ ವಹಿಸಿದ್ದ ತಾಂತ್ರಿಕ ನಿರ್ದೇಶಕ ಚಂದ್ರಕಾಂತ ಪಾಟೀಲ್, ವಿದ್ಯುತ್ ೇತ್ರದಲ್ಲಿ ಸಣ್ಣ ರ್ನಿಲಕ್ಷವೂ ದೊಡ್ಡ ಪರಿಣಾಮ ಬೀರಬಹುದು ಎಂಬ ಅರಿವಿನೊಂದಿಗೆ ಸುವರ್ಣ ದಡೇದ್ ಅವರು ಪ್ರತಿಯೊಂದು ಕಾರ್ಯದಲ್ಲಿ ಗಮನ ನೀಡಿ ಕೆಲಸ ಮಾಡುತ್ತಿದ್ದರು. ಸುರತೆ, ಗುಣಮಟ್ಟ ಮತ್ತು ಶಿಸ್ತಿನ ವಿಷಯಕ್ಕೆ ಬಂದರೆ ಅವರು ಯಾವತ್ತೂ ರಾಜಿಯಾದವರಲ್ಲ ಎಂದು ಕೊಂಡಾಡಿದರು.
ನಿವೃತ್ತಿ ಹೊಂದಿದ ಸುವರ್ಣ ದಡೇದ್ ಮಾತನಾಡಿ, ವಿದ್ಯುತ್ ೇತ್ರದಲ್ಲಿ ಕೆಲಸ ಮಾಡುವಾಗ ಸುರತೆ, ಶಿಸ್ತು ಮತ್ತು ಪ್ರಾಮಾಣಿಕತೆಗೆ ಮೊದಲ ಸ್ಥಾನ ನೀಡಲಾಗಿತ್ತು. ನನ್ನ ಈ ಪಯಣದಲ್ಲಿ ಮಾರ್ಗದರ್ಶನ ನೀಡಿದ ಎಲ್ಲ ಹಿರಿಯ ಅಧಿಕಾರಿಗಳು, ನನ್ನ ಜತೆ ಸೇರಿ ಕೆಲಸ ಮಾಡಿದವರು ಹಾಗೂ ಕೆಪಿಟಿಸಿಎಲ್ ಮತ್ತು ಜೆಸ್ಕಾಂನ ಎಲ್ಲ ಅಧಿಕಾರಿ/ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಜೆಸ್ಕಾಂ ಅಧ್ಯ ಪ್ರವಿಣ ಪಾಟೀಲ ಹರವಾಳ್, ಕಾರ್ಯ ಮತ್ತು ಪಾಲನೆ ವಲಯ ಕಚೇರಿ ಮುಖ್ಯ ಅಭಿಯಂತರ ವೆಂಕಟೇಶ ಹಾಲ್ವಿ, ಆರ್ಥಿಕ ಸಲಹೆಗಾರ್ತಿ ಮಹಾಲಕ್ಷಿ$್ಮ, ಇಂಜಿನಿಯರ್ಸ್ ಅಸೋಷಿಯೇಷನ್ ಉಪಾಧ್ಯ ಸಚಿನ್ ಹುಂಡೇಕಾರ, ಡಿಪ್ಲೊಮಾ ಇಂಜಿನಿಯರ್ಸ್ ಅಸೋಷಿಯೇಷನ್ ಉಪಾಧ್ಯ ಸಂತೋಷ ವಡ್ಕಿ, ಕವಿಪ್ರನಿನಿ ನೌಕರರ ಸಂದ ಉಪಾಧ್ಯ ಬಾಬು ಕೋರೆ, ವಿಶ್ವನಾಥ ರೆಡ್ಡಿ, ಸುನಂದಾ ಜೋಶಿ, ಎ.ಎಚ್. ಮುಮ್ತಾಜ್ ಇತರರಿದ್ದರು.
"
ಯುವ ಇಂಜಿನಿಯರ್ಗಳು ಕರ್ತವ್ಯವನ್ನು ಗೌರವದಿಂದ ನಿರ್ವಹಿಸಬೇಕು. ಜನಸೇವೆಯ ಮನೋಭಾವ ಎಂದಿಗೂ ಮರೆಯಬಾರದು. ವಿದ್ಯುತ್ ಗ್ರಾಹಕರ ಸೇವೆ ದೇವರ ಸೇವೆ ಎಂದು ಕಾಣಿ ಅವರ ಕೆಲಸ ಗೌರವ ಮತ್ತು ಶ್ರದ್ಧೆಯಿಂದ ಮಾಡಿಕೊಡಬೇಕು.