ಶರಣರ ಜ್ಞಾನದ ಬುತ್ತಿ ಉಣಬಡಿಸಿದ ಪ್ರವಚನ

ಕಲಬುರಗಿ ಜಯನಗರ ಅನುಭವ ಮಂಟಪದಲ್ಲಿ ಬಸವ ಸಮಿತಿ ಸೋಮವಾರ ಆಯೋಜಿಸಿದ್ದ ವಚನ ಆಷಾಢ ಪ್ರವಚನ ಮಾಲಿಕೆ ಸಮಾರೋಪದಲ್ಲಿ ಮುದಗಲ್​ ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು, ಕಲಾವಿದರಾದ ಶಂಕ್ರಯ್ಯ ಗುರುಮಠ, ಬಸವರಾಜ ಹೊನ್ನಿಗನೂರ ಅವರನ್ನು ಸತ್ಕರಿಸಲಾಯಿತು. ಡಾ.ವಿಲಾಸವತಿ ಖೂಬಾ, ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ, ಪ್ರೊ.ಕೆ.ಎಸ್​.ವಾಲಿ, ಡಾ.ಶಿವರಂಜನ್​ ಸತ್ಯಂಪೇಟೆ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಸವ ಸಮಿತಿ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ ಅನಿಸಿಕೆ
  • ವಚನ ಆಷಾಢ ಪ್ರವಚನ ಸಮಾರೋಪ
ಕಲಬುರಗಿ: ನಾಡಿನ ನಾಡಿ ಮಿಡಿತ ಅರಿತಿರುವ ಮುದಗಲ್​ ಕಲ್ಯಾಣಾಶ್ರಮದ ಪೂಜ್ಯ ಮಹಾಂತಸ್ವಾಮಿಗಳು 30 ದಿನಗಳ ಕಾಲ ಹೇಳಿದ ವಚನ ಆಷಾಢ ಪ್ರವಚನ ಆನುಭಾವಿಕ ನೆಲೆಯಲ್ಲಿ ನಡೆಯಿತು ಎಂದು ಕಲಬುರಗಿ ಬಸವ ಸಮಿತಿ ಉಪಾಧ್ಯಕ್ಷೆ ಡಾ.ಜಯಶ್ರೀ ದಂಡೆ ಹೇಳಿದರು.
ನಗರದ ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ ಸೋಮವಾರ ಆಯೋಜಿಸಿದ್ದ ವಚನ ಆಷಾಢ ಪ್ರವಚನ ಪ್ರಭುಲಿಂಗಲೀಲೆ: ಆನುಭಾವಿಕ ಪ್ರವಚನ ಸಮಾರೋಪದಲ್ಲಿ ಮಾತನಾಡಿದ ಅವರು, 28 ಪುರಾಣಗಳು, 9 ಚರಿತಾಮೃತಗಳ ಓದಿನ ಅನುಭವದಿಂದಾಗಿ ಬಸವಾದಿ ಶರಣರ ಕುರಿತಾದ ಾನದ ಬುತ್ತಿ ಉಣಬಡಿಸಿದರು ಎಂದರು.
ಪ್ರತಿಕ್ರಿಯೆ ನೀಡಿದ ಪತ್ರಕರ್ತ ಡಾ.ಶಿವರಂಜನ ಸತ್ಯಂಪೇಟೆ, ಅಯೋಮಯ ಬದುಕಿನ ಗೊಂದಲಗಳಿಗೆ ಸಮಾಧಾನದ ಉತ್ತರ ನೀಡಿದಂತಿದ್ದ ಈ ಪ್ರವಚನ ಲೋಕ ನೆಮ್ಮದಿಗೆ ಅಗತ್ಯವಾದ ಶರಣರ ವಿಚಾರ ಮತ್ತು ಪ್ರಮುಖ ಚಿಂತನೆಗಳಿಂದ ಕೂಡಿತ್ತು ಎಂದರು.
ಮುದಗಲ್​ ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಲಬುರಗಿ ಬಸವ ಸಮಿತಿ ಅಧ್ಯೆ ಡಾ.ವಿಲಾಸವತಿ ಖೂಬಾ ಅಧ್ಯತೆ ವಹಿಸಿದ್ದರು. ಕಲಾವಿದ ಶಂಕ್ರಯ್ಯ ಗುರುಮಠ, ತಬಲಾ ವಾದಕ ಬಸವರಾಜ ಹೊನ್ನಿಗನೂರ ಇದ್ದರು.
ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ ಪ್ರಾಸ್ತಾವಿಕ ಮಾತನಾಡಿದರು. ಎಚ್​.ಕೆ.ಉದ್ದಂಡಯ್ಯ ನಿರೂಪಿಸಿದರು.
"

ಕಲಬುರಗಿ ಬಸವ ಸಮಿತಿ ವತಿಯಿಂದ 2016ರಿಂದ ಈವರೆಗೆ ಶ್ರಾವಣ ಹಾಗೂ ಆಷಾಢ ಮಾಸದಲ್ಲಿ ಪ್ರವಚನ ಕಾರ್ಯಕ್ರಮ, ಮಹಾದೇವಿಯಕ್ಕಗಳ ಸಮ್ಮೇಳನ, ಅರಿವಿನ ಮನೆ ದತ್ತಿ ಕಾರ್ಯಕ್ರಮ ನಿರಂತರ ಹಮ್ಮಿಕೊಳ್ಳಲಾಗುತ್ತಿದೆ.

— ಡಾ.ವೀರಣ್ಣ ದಂಡೆ, ನಿವೃತ್ತ ಪ್ರಾಧ್ಯಾಪಕ, ಗುಲ್ಬರ್ಗ ವಿವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net