ಭಾರಿ ಬಿರುಗಾಳಿಗೆ ಕೆಲಕಚ್ಚಿದ ಬಾಳೆ

ಕೆಂಭಾವಿ ಪುರಸಭೆ ವ್ಯಾಪ್ತಿಯ ಪತ್ತೇಪುರ ಗ್ರಾಮದಲ್ಲಿ ಭಾನುವಾರ ಬೀಸಿದ ಭಾರಿ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ರೈತ ಶಿವಪ್ಪ ಬೆಳೆದಿದ್ದ ನೂರಾರು ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿರುವುದು.
ಕೆಂಭಾವಿ ಪುರಸಭೆ ವ್ಯಾಪ್ತಿಯ ಪತ್ತೇಪುರ ಗ್ರಾಮದಲ್ಲಿ ಭಾನುವಾರ ಬೀಸಿದ ಭಾರಿ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ರೈತ ಶಿವಪ್ಪ ಬೆಳೆದಿದ್ದ ನೂರಾರು ಬಾಳೆ ಗಿಡಗಳು ಸಂಪೂರ್ಣ ನೆಲಕಚ್ಚಿರುವುದು.
Published on
ಕೆಂಭಾವಿ: ಪತ್ತೇಪುರ ಗ್ರಾಮದಲ್ಲಿ ಭಾನುವಾರ ಸಂಜೆ ಬೀಸಿದ ಭಾರಿ ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ನೂರಾರು ಬಾಳೆ ಗಿಡ ಸಂಪೂರ್ಣ ನೆಲಕಚ್ಚಿವೆ.
ಗ್ರಾಮದ ರೈತ ಶಿವಪ್ಪ ಕಾಡಮಗೇರಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸಾಲ ಮಾಡಿ ಬಹಳ ಪರಿಶ್ರಮದಿಂದ ಬಾಳೆ ತೋಟ ಮಾಡಿದ್ದರು. ಇನ್ನೆನು ಕೆಲ ದಿನಗಳಲ್ಲಿ ಬಾಳೆ ಫಸಲು ಕೈಗೆ ಬಂದು ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ವಿಧಿಯ ಆಟ ಬೇರೆಯೇ ಆಗಿತ್ತು. ಭಾನುವಾರ ಸಂಜೆ ದಿಢೀರನೆ ಅಪ್ಪಳಿಸಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಸುಮಾರು 250ರಿಂದ 300 ಬಾಳೆ ಗಿಡಗಳು ಬುಡಸಮೇತ ಮುರಿದು ಬಿದ್ದು ಸಂಪೂರ್ಣ ನಾಶವಾಗಿವೆ.
ಸಾಲದ ಸುಳಿಗೆ ಸಿಲುಕಿ ತತ್ತರಿಸಿರುವ ರೈತ ಶಿವಪ್ಪ, ಕೈಗೆ ಬಂದ ಬೆಳೆ ಕಣ್ಣೆದುರೇ ಮಣ್ಣು ಪಾಲಾಗಿರುವುದನ್ನು ನೋಡಿ ಕಣ್ಣೀರು ಹಾಕುವಂತಾಗಿದೆ. ತಮಗೆ ಆಗಿರುವ ಈ ಭಾರಿ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಅವರು ಅಳಲು ತೋಡಿಕೊಂಡಿದ್ದಾರೆ.
ಅಧಿಕಾರಿಗಳ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ್ದಾರೆ. ಹಾನಿಯ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಿ ಉನ್ನತ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net