ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲಾಪುರೆ ಪ್ರಶ್ನೆಗೆ ಉತ್ತರಿಸಿದ ಸಚಿವ ಜಾರಕಿಹೊಳಿ, ಈಶಾಲ್ಯ ವಲಯ ವ್ಯಾಪ್ತಿಯ ಕಲಬುರಗಿ ಜಿಲ್ಲೆಯಲ್ಲಿ 1462 ಕಿ.ಮೀ ಉದ್ದದ ಜಿಲ್ಲಾ ಮುಖ್ಯರಸ್ತೆಗಳಿದ್ದು, ಇದರಲ್ಲಿ 845 ಕಿ.ಮೀ ಸುಸ್ಥಿತಿಯಲ್ಲಿದೆ. 48 ಕಿ.ಮೀ ರಸ್ತೆ ಹಾಳಾಗಿದೆ. ಬಾಕಿ 569 ಕಿ.ಮೀ ಉದ್ದದ ರಸ್ತೆ ನಿರ್ವಹಣೆಗೆ 2.62 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈವರೆಗೆ ನಿರ್ವಹಣೆ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ವಿವರಿಸಿದರು.