ಜೂನ್ 16ರಂತೆ ಜಿಲ್ಲೆಯಾದ್ಯಂತ 23,71,542 ಮತದಾರರಿದ್ದು, ಈ ಪೈಕಿ ಜುಲೈ 2ರವರೆಗೆ ಶೇ. 33.22 ರಷ್ಟು ಮತದಾರರಿಗೆ ಬಿಎಲ್ಓಗಳು ಮನೆ, ಮನೆಗೆ ತೆರಳಿ ಗಣತಿ ನಮೂನೆ ವಿತರಿಸಿದ್ದಾರೆ. ಈವರೆಗೆ 8,318 (ಶೇ.0.35) ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆ ಪಡೆದು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಿದ್ದಾರೆ. 1,152 (ಶೇ.0.05) ಮತದಾರರು ಸ್ವಯಂ ಪ್ರೇರಿತವಾಗಿ ಆನ್ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. ಬಿಎಲ್ಓಗಳು ಮನೆ&ಮನೆ ಭೇಟಿ ನೀಡಿದಾಗ ಈವರೆಗೆ 11 ಮತದಾರರು ಸ್ಥಳಾಂತರಗೊಂಡಿರುವುದು ಮತ್ತು 60 ಜನ ನಿಧನ ಹೊಂದಿರುವ ಬಗ್ಗೆ ವರದಿಯಾಗಿದೆ.