41 ಹೂಡಿಕೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ (ಬಿಯಾಂಡ್ ಬೆಂಗಳೂರು) ಉಳಿದ ಕಡೆಗಳಲ್ಲಿ ಆಗಲಿದೆ. 4 ಯೋಜನೆಗಳು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಯೋಜನೆಗಳಾಗಿವೆ. ತೈವಾನಿನ ಟೀಮಿಂಗ್ ಆಟೋಮೇಷನ್, ದಕ್ಷಿಣ ಕೊರಿಯಾದ ವೈಜೆ ಲಿಂಕ್, ಜರ್ಮನಿಯ ರೇವುಂ ಮತ್ತು ಜಪಾನ್ ಮೂಲದ ಶಿಂಕೋ ಕಂಪನಿಗಳು ಕ್ರಮವಾಗಿ 20 ಕೋಟಿ ರೂ, 177.96 ಕೋಟಿ ರೂ, 16.50 ಕೋಟಿ ರೂ ಮತ್ತು 100 ಕೋಟಿ ರೂ. (ಒಟ್ಟು 314.46 ಕೋಟಿ) ಹೂಡಿಕೆ ಮಾಡುತ್ತಿವೆ. ಇವುಗಳಿಂದ 503 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವರು ತಿಳಿಸಿದರು.