Fake phd: ಪಿಎಚ್.ಡಿ ತ್ಯಜಿಸಿದ 452 ಅತಿಥಿ ಉಪನ್ಯಾಸಕರು

ನಕಲಿ ಪಿಎಚ್‌ಡಿ
ನಕಲಿ ಪಿಎಚ್‌ಡಿ
Published on

ಪ್ರಮುಖ ಮುಖ್ಯಾಂಶಗಳು

  • 2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಸಂಬಂಧ ಕೆಲವು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಯುಜಿಸಿ ನಿಗದಿಪಡಿಸಿರುವ ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವುದಾಗಿ ನಮೂದಿಸಿದ್ದರು.
  • ಆ ಪ್ರಕಾರ, ಆಯ್ಕೆಯಾಗಿ ಸಂಬಂಧಪಟ್ಟ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
  • 2026-27ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅವರು ಸಲ್ಲಿಸಿರುವ ಆನ್‌ಲೈನ್ ಅರ್ಜಿಯಲ್ಲಿನ ವಿದ್ಯಾರ್ಹತೆ ಪರಿಶೀಲಿಸಿದಾಗ ಪಿಎಚ್.ಡಿ. ಅರ್ಹತೆಯನ್ನು ಕ್ಲೇಮ್ ಮಾಡದೇ ಇರುವುದು ಕಂಡುಬಂದಿದೆ.
  • ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ನೋಟಿಸ್
ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಪೈಕಿ ಕಳೆದ ವರ್ಷ ಪಿಎಚ್.ಡಿ ಅರ್ಹತೆ ಪಡೆದಿರುವುದಾಗಿ ದಾಖಲೆಗಳನ್ನು ಸಲ್ಲಿಸಿದ್ದ 452 ಮಂದಿ, ಈ ಬಾರಿ ಸ್ನಾತಕೋತ್ತರ ಪದವಿ ಅರ್ಹತೆ ಮೇಲೆ ಅರ್ಜಿ ಸಲ್ಲಿಸಿದ್ದಾರೆ. ಇಂತಹವರನ್ನು ಪತ್ತೆಹಚ್ಚಿರುವ ಕಾಲೇಜು ಶಿಕ್ಷಣ ಇಲಾಖೆಯು, ವಾರದೊಳಗೆ ಸ್ಪಷ್ಟನೆ ನೀಡದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಸಂಬಂಧ ಕೆಲವು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಯುಜಿಸಿ ನಿಗದಿಪಡಿಸಿರುವ ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವುದಾಗಿ ನಮೂದಿಸಿದ್ದರು. ಆ ಪ್ರಕಾರ, ಆಯ್ಕೆಯಾಗಿ ಸಂಬಂಧಪಟ್ಟ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 2026-27ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅವರು ಸಲ್ಲಿಸಿರುವ ಆನ್‌ಲೈನ್ ಅರ್ಜಿಯಲ್ಲಿನ ವಿದ್ಯಾರ್ಹತೆ ಪರಿಶೀಲಿಸಿದಾಗ ಪಿಎಚ್.ಡಿ. ಅರ್ಹತೆಯನ್ನು ಕ್ಲೇಮ್ ಮಾಡದೇ ಇರುವುದು ಕಂಡುಬಂದಿದೆ. ಅಂತಹ ಅತಿಥಿ ಉಪನ್ಯಾಸಕರ ವಿಷಯವಾರು ಮತ್ತು ಕಾಲೇಜುವಾರು ವಿವರಗಳನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕ್ಲೇಮ್ ಮಾಡದವರಿಗೆ ನೋಟಿಸ್:

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯು ಸಂಬಂಧಪಟ್ಟ ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದು, ಕಳೆದ ವರ್ಷ ಪಿಎಚ್.ಡಿ ಕ್ಲೇಮ್ ಮಾಡಿದವರು, ಈ ವರ್ಷ ಕ್ಲೇಮ್ ಮಾಡದಿರುವುದಕ್ಕೆ/ಅರ್ಜಿಯಲ್ಲಿ ಪಿಎಚ್.ಡಿ ವಿವರಣೆಗಳನ್ನು ನೀಡದಿರುವುದಕ್ಕೆ ಕಾರಣವೇನು?, ಶೈಕ್ಷಣಿಕ ಹಿತದೃಷ್ಟಿಯಿಂದ ಲಿಖಿತ ವಿವರಣೆಗಳು ಅಗತ್ಯವಿದ್ದು, ದಾಖಲೆಗಳನ್ನು ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ನೋಟಿಸ್ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ನೋಟಿಸ್ ಪಡೆದಿರುವ ಅತಿಥಿ ಉಪನ್ಯಾಸಕರು ಏಳು ದಿನದೊಳಗೆ ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರಿಗೆ ವಿವರಣೆಗಳನ್ನು ನೀಡಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ವಿವರಣೆಗಳನ್ನು ಸಲ್ಲಿಸದಿದ್ದಲ್ಲಿ ಯಾವುದೇ ವಿರಣೆ ನೀಡಿಲ್ಲವೆಂದು ಪರಿಗಣಿಸಿ, ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಅಗತ್ಯ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕಳೆದ ವರ್ಷ ದಾಖಲೆಗಳಲ್ಲಿ 249 ನಕಲಿಗಳ ಪತ್ತೆ

ನಕಲಿ ಪಿಎಚ್.ಡಿ ಪ್ರಮಾಣಪತ್ರಗಳನ್ನು ಸಲ್ಲಿಸಿ 2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳನ್ನು ಪಡೆದಿದ್ದ ಒಟ್ಟು 249 ಅಭ್ಯರ್ಥಿಗಳನ್ನು ಈ ಹಿಂದೆ ಇಲಾಖೆ ಪತ್ತೆಹಚ್ಚಿದೆ. ಇವರಿಗೆ ಅತಿಥಿ ಉಪನ್ಯಾಸಕ ಹುದ್ದೆ ನೀಡುವ ವಿಷಯದಲ್ಲಿ ಪ್ರಕರಣವು ನ್ಯಾಯಾಲಯದಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net