44 ವರ್ಷದ ಬಳಿಕ ಗ್ರಾಮದೇವಿ ಜಾತ್ರೆ

ಸವದತ್ತಿ ನಗರದಲ್ಲಿ ಗ್ರಾಮದೇವಿ ಜಾತ್ರೆ ಅಂಗವಾಗಿ ಮಂಟಪ ಹಾಕುವ ಕಾರ್ಯಕ್ಕೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ವಿರೂಪಾ ಮಾಮನಿ, ಅಡಿವೆಪ್ಪ ಬಿಳಗಿ, ಬಸವರಾಜ ಕಾರದಗಿ, ಅಶ್ವತ್ಥ ವೈದ್ಯ ಇತರರಿದ್ದರು.
ಸವದತ್ತಿ ನಗರದಲ್ಲಿ ಗ್ರಾಮದೇವಿ ಜಾತ್ರೆ ಅಂಗವಾಗಿ ಮಂಟಪ ಹಾಕುವ ಕಾರ್ಯಕ್ಕೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ವಿರೂಪಾ ಮಾಮನಿ, ಅಡಿವೆಪ್ಪ ಬಿಳಗಿ, ಬಸವರಾಜ ಕಾರದಗಿ, ಅಶ್ವತ್ಥ ವೈದ್ಯ ಇತರರಿದ್ದರು.
Published on
ಸವದತ್ತಿ: ನಗರದಲ್ಲಿ 44 ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮ ದೇವತೆ ಜಾತ್ರೆ ಸವದತ್ತಿಯ ಸಂಸತಿ, ಪರಂಪರೆ ಹಾಗೂ ಏಕತೆಯ ಪ್ರತಿಕವಾಗಿದೆ. ಅದ್ದೂರಿ ಜಾತ್ರೆ ನೆರವೇರಲಿದ್ದು, ಜನರ ಸಹಕಾರ ಅಗತ್ಯವಾಗಿದೆ ಎಂದು ಜಾತ್ರಾ ಕಮಿಟಿ ಗೌರವಾಧ್ಯ, ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸ್ಥಳಿಯ ಗಡೇಕಾರ ಪ್ಲಾಟ್​ ವ್ಯಾಪ್ತಿಯ ಹದ್ಲಿ ಬಿಲ್ಡಿಂಗ್​ ಹಿಂಭಾಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಂಟಪ ಹಾಕುವ ಕಾರ್ಯಕ್ರಮದಲ್ಲಿ ಶಾಸೊಕ್ತವಾಗಿ ಪೂಜೆ ಸಲ್ಲಿಸಿ ಮಾತನಾಡಿದರು.
ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ, ಜಾತ್ರಾ ಕಮಿಟಿ ಅಧ್ಯ ವಿರೂಪಾ ಮಾಮನಿ ಮಾತನಾಡಿ, ಗ್ರಾಮದೇವಿ ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಬಡ್ಡಿ, ಕುಸ್ತಿ, ಮಲ್ಲಕಂಬ, ತೆರೆಬಂಡಿ, ಎತ್ತಿನ ಗಾಡಿ ಓಟ ಮತ್ತು ಟಗರಿನ ಕಾಳಗ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಲಾಗುವುದು. ನಾಡಿನ ವಿವಿಧ ಮಠಾಧೀಶರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಪ್ರವಚನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಜ್ಜಯ್ಯಸ್ವಾಮಿ ನೇತೃತ್ವದಲ್ಲಿ ಹಾಗೂ ಮುಖಂಡರು, ವಿವಿಧ ಸಮುದಾಯಗಳ ಗುರು&ಹಿರಿಯರ ಸಮ್ಮುಖದಲ್ಲಿ ಪೆಂಡಾಲ್​ ಹಾಕುವ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಜಾತ್ರೆ ಯಶಸ್ವಿಯಾಗಿ ನೆರವೇರಲೆಂದು ಪ್ರಾರ್ಥಿಸಲಾಯಿತು.
ಮುಖಂಡರಾದ ಅಶ್ವತ್ಥ ವೈದ್ಯ, ರತ್ನಾ ಮಾಮನಿ, ಜಗದೀಶ ಶಿಂತ್ರಿ, ಅಡಿವೆಪ್ಪ ಬೀಳಗಿ, ಅಲ್ಲಮಪ್ರಭು ಪ್ರಭುನವರ,
ಎಲ್​.ಆರ್​. ಕುಲಕರ್ಣಿ, ಡಾ.ಎನ್​.ಸಿ.ಬೆಂಡಿಗೇರಿ, ಬಸವರಾಜ ಕಾರದಗಿ, ಬಿ.ವಿ.ಮಲ್ಲಗೌಡರ, ಐ.ಪಿ.ಪಾಟೀಲ, ಶಿವಾನಂದ ಮೇಟಿ, ಶ್ರೇಯಸ್​ ಮಾಮನಿ, ಶ್ರೀಶೈಲ ಮುತಗೊಂಡ, ಬಿ.ಎನ್​.ಪ್ರಭುನವರ, ಮದನಲಾಲ ಚೋಪ್ರಾ, ಭರಮಪ್ಪ ಅಣ್ಣಿಗೇರಿ, ಬಸವರಾಜ ಪುಟ್ಟಿ, ಪಿ.ಎಸ್​.ಹಂಪಣ್ಣವರ, ಅಮೃತ ಸುಳ್ಳದ, ಶ್ರೀಶೈಲ ಕಾರದಗಿ, ವೈ.ಎಂ.ಯಾಕೊಳ್ಳಿ, ಭೂಪಾಲ ಬಾಂಡೇಕರ, ಮಲ್ಲಿಕಾರ್ಜುನ ಬೀಳಗಿ, ಮಹಾಂತೇಶ ಪಂಪನವರ, ವಿರೂಪಾ ಹೆರಕಲ್ಲ, ಶಿವರಾಜ ಚೌಗಲಾ, ರಾಮತೀರ್ಥ ಜೋಶಿ, ಬಸವರಾಜ ಹಂಪಣ್ಣವರ, ಸೋಮಯ್ಯ ವಡಿಯರ, ಚಂದ್ರಶೇಖರ ಅಮ್ಮಿನಬಾವಿ, ಬಾಬು ಕಾಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net