28 ವಿದ್ಯಾರ್ಥಿನಿಯರಿಗೆ ಉದ್ಯೋಗ ಭಾಗ್ಯ

ನಾಡಿನ ವಿವಿಧ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳಲ್ಲಿ ಉದ್ಯೋಗ ಪಡೆದ ಕಲಬುರಗಿಯ ಶರಣಬಸವ ವಿವಿ ಬಿಬಿಎ ವಿಭಾಗದ ವಿದ್ಯಾರ್ಥಿನಿಯರೊಂದಿಗೆ ವಿವಿ ಕುಲಾಧಿಪತಿ ಡಾ.ದಾಕ್ಷಾಯಿಣಿ ಅಪ್ಪ, ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಇತರರಿದ್ದಾರೆ.
ನಾಡಿನ ವಿವಿಧ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳಲ್ಲಿ ಉದ್ಯೋಗ ಪಡೆದ ಕಲಬುರಗಿಯ ಶರಣಬಸವ ವಿವಿ ಬಿಬಿಎ ವಿಭಾಗದ ವಿದ್ಯಾರ್ಥಿನಿಯರೊಂದಿಗೆ ವಿವಿ ಕುಲಾಧಿಪತಿ ಡಾ.ದಾಕ್ಷಾಯಿಣಿ ಅಪ್ಪ, ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್​ ಮಾಕಾ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಕಂಪನಿಗಳಲ್ಲಿ ಜಾಬ್​ ಗಿಟ್ಟಿಸಿಕೊಂಡು ಎಸ್​ಬಿ ಕಾಲೇಜು ಸ್ಟೂಡೆಂಟ್ಸ್​
  • ಸಾಧಕಿಯರಿಗೆ ಡಾ.ಅವ್ವ ಅಭಿನಂದನೆ
 ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯ ವಿಶೇಷವಾಗಿ ಮಹಿಳೆಯರಿಗಾಗಿ ನಡೆಸುತ್ತಿರುವ ಬ್ಯಾಚುಲರ್​ ಆಫ್​ ಬಿಜಿನೆಸ್​ ಅಡ್ಮಿನಿಸ್ಟ್ರೆಷನ್​ (ಬಿಬಿಎ) ವಿಭಾಗದ 28 ವಿದ್ಯಾರ್ಥಿನಿಯರು ವಿವಿಧ ಸಾಫ್ಟ್​ವೇರ್​ ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಕರ್ಷಕ ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ.
ವಿದ್ಯಾರ್ಥಿನಿಯರಾದ ಶಿವಾನಿ ಪಾಟೀಲ್​, ಸುಷ್ಮಾ ಹಾಗೂ ಫರಿಯಾ ಅಂಜುಮ್​ ಅವರು ಜಾಗತಿಕ ಮಟ್ಟದ ಆನ್​ಲೈನ್​ ವೃತ್ತಿಪರ ತರಬೇತಿ ಸಂಸ್ಥೆಯಾದ ಇಂಟೆಲಿಪಾಟ್​ ಸಾಫ್ಟ್​ವೇರ್​ ಸೊಲ್ಯೂಷನ್ಸ್​ನಲ್ಲಿ ವಾರ್ಷಿಕ 8 ಲಕ್ಷ ರೂ. ವೇತನದೊಂದಿಗೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಐವರು ವಿದ್ಯಾರ್ಥಿನಿಯರು ವಿವಿಧ ಕಂಪನಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ತಲಾ ವಾರ್ಷಿಕ 3 ಲಕ್ಷ ರೂ. ವೇತನದೊಂದಿಗೆ ನೇಮಕಗೊಂಡಿದ್ದಾರೆ. ಆರು ವಿದ್ಯಾರ್ಥಿನಿಯರು ವಾರ್ಷಿಕ 2.5 ಲಕ್ಷ ರೂ. ಹಾಗೂ ಹತ್ತು ವಿದ್ಯಾರ್ಥಿನಿಯರು ತಲಾ 2 ಲಕ್ಷ ರೂ. ವೇತನದೊಂದಿಗೆ ವಿವಿಧ ಸಂಸ್ಥೆಗಳಲ್ಲಿ ನೇಮಕಗೊಂಡಿದ್ದಾರೆ.
ಈ ಮಹತ್ತರ ಸಾಧನೆಗಾಗಿ ವಿದ್ಯಾರ್ಥಿನಿಯರು, ಬೋಧಕ ಸಿಬ್ಬಂದಿ ಹಾಗೂ ಬಿಬಿಎ ವಿಭಾಗದ ಚೇರ್​ಪರ್ಸನ್​ ಪ್ರೊ.ಶಿಲ್ಪಾ ಕಂದಗೂಳ ಅವರನ್ನು ಸನ್ಮಾನಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಿಣಿ ಎಸ್​.ಅಪ್ಪ ಅವರು ವಿದ್ಯಾರ್ಥಿನಿಯರು ಮತ್ತು ಶಿಕ್ಷಕರನ್ನು ಅಭಿನಂದಿಸಿ, ಇದು ಅತ್ಯಂತ ಶ್ಲಾನೀಯ ಹಾಗೂ ಮಾದರಿ ಸಾಧನೆ ಎಂದು ಪ್ರಶಂಸಿದರು.
ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್​ ಮಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್​.ಎಚ್​.ಹೊನ್ನಳ್ಳಿ ಹಾಗೂ ಹಣಕಾಸು ಅಧಿಕಾರಿ ಡಾ.ಕಿರಣ್​ ಮಕಾ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net