ಅಕ್ರಮವಾಗಿ ಸಾಗಿಸುತ್ತಿದ್ದ 22 ಜಾನುವಾರು ಗೋಶಾಲೆಗೆ

 ಬಸವಕಲ್ಯಾಣ ತಾಲೂಕಿನ ಅಲಗೂಡ ಹತ್ತಿರ ಭಾನುವಾರ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಶಾಸಕ ಶರಣು ಸಲಗರ ರಕ್ಷಣೆ ಮಾಡಿದರು.
ಬಸವಕಲ್ಯಾಣ ತಾಲೂಕಿನ ಅಲಗೂಡ ಹತ್ತಿರ ಭಾನುವಾರ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಶಾಸಕ ಶರಣು ಸಲಗರ ರಕ್ಷಣೆ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋವುಗಳನ್ನು ರಸಿದ ಶಾಸಕ ಸಲಗರ
  • ಮೃತಪಟ್ಟ ಎತ್ತಿಗೆ ಅಂತ್ಯಕ್ರಿಯೆ
ಬಸವಕಲ್ಯಾಣ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ ಏಳು ಆಕಳು ಸೇರಿ 22 ಜನುವಾರುಗಳನ್ನು ಶಾಸಕ ಶರಣು ಸಲಗರ ರಸಿದ್ದಾರೆ. ಅದರಲ್ಲಿ ಒಂದು ಎತ್ತು ವಾಹನದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ.
ತಾಲೂಕಿನ ಅಲಗೂಡ ಗ್ರಾಮದ ಸಮೀಪ ಭಾನುವಾರ ಬೆಳಗ್ಗೆ ಮೂರು ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಸಿ ಇಲಾಖೆ ಅಧಿಕಾರಿಗಳಿಗೆ, ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿದ ಶಾಸಕರು ಗೋವುಗಳನ್ನು ಚಿಟಗುಪ್ಪ ತಾಲೂಕಿನ ಚಾಂಗಲೇರಾದ ಗೋಶಾಲೆಗೆ ದಾಖಲಿಸಿದ್ದಾರೆ.
ಕೋಹಿನೂರ ಪಹಾಡ, ಆಳಂದ ಸೇರಿ ಬೇರೆ ಬೇರೆ ಕಡೆಗಳಿಂದ ಮೂರು ಗೂಡ್ಸ್​ ವಾಹನದಲ್ಲಿ ಅಕ್ರಮವಾಗಿ ಆಕಳು, ಎತ್ತುಗಳು, ಎಮ್ಮೆ ಕರು ಸೇರಿ ಒಟ್ಟು 23 ಜಾನುವಾರುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಭೋಸಗಾ ಗ್ರಾಮದ ಯುವಕರ ತಂಡ ಕಾರ್ಯಾಚರಣೆ ನಡೆಸಿ ವಾಹನಗಳನ್ನು ತಡೆದು ಸ್ಥಳಿಯ ಶಾಸಕ ಶರಣು ಸಲಗರ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಶಾಸಕ ಸಲಗರ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ವಾಹನಗಳಲ್ಲಿ ಯಾವುದೇ ಅನುಮತಿ ಪತ್ರವಿಲ್ಲದೆ ಜಾನುವಾರುಗಳು ಉಸಿರಾಡಲು ತೊಂದರೆ ಆಗುವ ರೀತಿಯಲ್ಲಿ ತುರುಕಿ ಸಾಗಿಸುತ್ತಿರುವುದು ಕಂಡು ಸಾಗಾಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಠಾಳ ಪೊಲೀಸ್​ ಠಾಣೆಯ ಪಿಎಸ್​ಐ ಸುವರ್ಣ ಮಲಶೆಟ್ಟಿ ಹಾಗೂ ಪೊಲೀಸರು ಸಾಗಾಣಿಕೆದಾರರನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಪಸು ವೈದ್ಯಾಧಿಕರಿ ರಾಜಶೇಖರ ಎಂ.ಬಿ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗೋಶಾಲೆಗೆ ಹಸ್ತಾಂತರ: ಗೂಡ್ಸ್​ ವಾಹನದಲ್ಲಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ಗೋವುಗಳನ್ನು ಶಾಸಕ ಶರಣು ಸಲಗರ ರಸಿ ಚಾಂಗಲೇರಾ ಗೋಶಾಲೆಗೆ ದಾಖಲಿಸಿದ್ದಾರೆ. ವಾಹನದಲ್ಲಿಯೇ ಉಸಿರುಗಟ್ಟಿ ಸಾವನ್ನಪ್ಪಿದ್ದ ಎತ್ತಿಗೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಿ ಗೋ ಪ್ರೇಮ ಮತ್ತು ಕಾಳಜಿಗೆ ಮೆರೆದಿದ್ದಾರೆ.
"

ಆಕಳು, ಎತ್ತುಗಳನ್ನು ಉಳಿಸಿ ಬೆಳೆಸುವುದು ಎಲ್ಲರ ಧರ್ಮ. ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಕಾನೂನು ಬಾಹಿರವಾಗಿ ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net