ಇದೊಂದು ಅತ್ಯಂತ ವಿರಳ ಮತ್ತು ವೈದ್ಯಕೀಯವಾಗಿ ಮಹತ್ವದ ಶಸ್ತ್ರಚಿಕಿತ್ಸೆಯಾಗಿದೆ. ಆಸ್ಟಿಯೋನೆಕ್ರೋಸಿಸ್ನಿಂದ ಕಂಡುಬಂದಿದ್ದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದ ಬಾಲಕ, ರೋಬಾಟಿಕ್ ನೆರವಿನ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದ ವಿಶ್ವದ ಅತ್ಯಂತ ಕಿರಿಯ ರೋಗಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅತ್ಯಂತ ವಿರಳವಾಗಿ ಕಂಡುಬರುವ ಈ ಸ್ಥಿತಿಯು ಒಂದು ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ನೋವು ಉಂಟುಮಾಡಿ, ರೋಗಿಯ ದೈಹಿಕ ಚಟುವಟಿಕೆಗಳನ್ನು ತೀವ್ರವಾಗಿ ಸೀಮಿತಗೊಳಿಸಿತ್ತು.