16ರಿಂದ 22ನೇ ಸತೀಶ್​ ಶುಗರ್ಸ್​ ಅವಾರ್ಡ್ಸ್​

ಗೋಕಾಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮುಖಂಡ ರಿಯಾಜ್​ ಚೌಗಲಾ ಮಾತನಾಡಿದರು. ಪ್ರಕಾಶ ಲಟ್ಟಿ, ಸುರೇಶ ಜೋರಾಪುರ ಇತರರಿದ್ದರು.
ಗೋಕಾಕ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮುಖಂಡ ರಿಯಾಜ್​ ಚೌಗಲಾ ಮಾತನಾಡಿದರು. ಪ್ರಕಾಶ ಲಟ್ಟಿ, ಸುರೇಶ ಜೋರಾಪುರ ಇತರರಿದ್ದರು.
Published on
ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜ.16ರಿಂದ 19ರವರೆಗೆ 22ನೇ ಸತೀಶ್​ ಶುಗರ್ಸ್​ ಅವಾರ್ಡ್ಸ್​ ಸಾಂಸತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಟಕ ರಿಯಾಜ್​ ಚೌಗಲಾ ತಿಳಿಸಿದರು.
ಇಲ್ಲಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಕಳೆದ ವರ್ಷದ ಭಾಷಣ ಸ್ವರ್ಧೆಯ ವಿಜೇತ ವಿದ್ಯಾರ್ಥಿಗಳು ಉದ್ಘಾಟಿಸುವರು. ಜ.16ರಂದು ಪ್ರಾಥಮಿಕ ಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ, ಸಮೂಹ ನತ್ಯ ಸ್ಪರ್ಧೆ ನಡೆಯಲಿದೆ. ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ ಜಾನಪದ ಗಾಯನ ಸ್ಪರ್ಧೆ ಹಾಗೂ ಕಾಲೇಜು ವಿಭಾಗಕ್ಕೆ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ ಎಂದರು.
ಜ.17ರಂದು ಕಾಲೇಜು ವಿಭಾಗಕ್ಕೆ ಜಾನಪದ ಗಾಯನ ಸ್ಪರ್ಧೆ, ಮುಕ್ತ ಏಕಾಂಗಿ ನೃತ್ಯ, ಪ್ರಾಥಮಿಕ ಶಾಲೆ ವಿಭಾಗಕ್ಕೆ ಜಾನಪದ ನೃತ್ಯ. ಪ್ರೌಢಶಾಲೆ ವಿಭಾಗಕ್ಕೆ ಸಮೂಹ ನೃತ್ಯ ಏರ್ಪಡಿಸಲಾಗಿದೆ. ಜ.18ರಂದು ಮುಕ್ತ ಜಾನಪದ ಗಾಯನ ಸ್ಪರ್ಧೆ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ ಹಾಗೂ ಮುಕ್ತ ಸಮೂಹ ನೃತ್ಯ ಸ್ಪರ್ಧೆ ನಡೆಯಲಿವೆ. ವಿಜೇತರಿಗೆ ಸಚಿವ ಸತೀಶ ಜಾರಕಿಹೊಳಿ ಮತ್ತು ಗಣ್ಯರು ಬಹುಮಾನ ವಿತರಿಸುವರು. ಜ.19ರಂದು ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಜರುಗಲಿವೆ ಎಂದು ಮಾಹಿತಿ ನೀಡಿದರು.
ಪ್ರಾಚಾರ್ಯ ಪ್ರಕಾಶ ಲಟ್ಟಿ, ಸುರೇಶ ಜೋರಾಪುರ, ಕಾಟೇಶ ಗೋಕಾವಿ, ರಮೇಶ ಕಳ್ಳಿಮನಿ ಹಾಗೂ ಐ.ಎಸ್​.ನಗಾರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net