ಎಸ್​ಐಆರ್​ನಲ್ಲಿ ಶೇ.100 ಗುರಿ ಸಾಧನೆ

ಭಾಲ್ಕಿ ತಹಸಿಲ್​ ಕಚೇರಿಯಲ್ಲಿ ಗುರುವಾರ ಕರೆದಿದ್ದ  ವಿವಿಧ ಪಕ್ಷದ ಮುಖಂಡರ ಸಭೆಯಲ್ಲಿ ಚುನಾವಣಾ ನೋಂದಣಾಧಿಕಾರಿ ಶಂಕರ, ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರಿ, ಹಣಮಂತರಾವ ಚವ್ಹಾಣ್​, ವೀರಣ್ಣ ಕಾರಬಾರಿ ಇತರರಿದ್ದರು.
ಭಾಲ್ಕಿ ತಹಸಿಲ್​ ಕಚೇರಿಯಲ್ಲಿ ಗುರುವಾರ ಕರೆದಿದ್ದ ವಿವಿಧ ಪಕ್ಷದ ಮುಖಂಡರ ಸಭೆಯಲ್ಲಿ ಚುನಾವಣಾ ನೋಂದಣಾಧಿಕಾರಿ ಶಂಕರ, ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರಿ, ಹಣಮಂತರಾವ ಚವ್ಹಾಣ್​, ವೀರಣ್ಣ ಕಾರಬಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರಿ ಮಾಹಿತಿ
  • ಭಾಲ್ಕಿ ತಹಸಿಲ್​ ಕಚೇರಿಯಲ್ಲಿ ಸಭೆ
ಭಾಲ್ಕಿ: ಭಾಲ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಕೇಂದ್ರದ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಡೆದ 2026ನೇ ಸಾಲಿನ ಮತದಾರರ ಸಮಗ್ರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯಲ್ಲಿ ಸಂಪೂರ್ಣ ಶೇ.100 ಗುರಿ ಸಾಧಿಸಿದ್ದೇವೆ ಎಂದು ತಹಸೀಲ್ದಾರ್​ ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿದರು.
ನಗರದ ತಹಸಿಲ್​ ಕಚೇರಿಯಲ್ಲಿ ಗುರುವಾರ ಕರೆದಿದ್ದ ವಿವಿಧ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಜೂ.30ರಂದು ಎಸ್​ಐಆರ್​ ಪ್ರಕ್ರಿಯೆಗೆ ಚಾಲನೆ ನೀಡಿ ಆ.8ರೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚನೆ ಕೂಡ ನೀಡಿತು. ಅದರಂತೆ ಕ್ಷೇತ್ರದಲ್ಲಿ ಎಸ್​ಐಆರ್​ ಪ್ರಕ್ರಿಯೆ ಆರಂಭಿಸಿ ನಿಗದಿತ ಎರಡ್ಮೂರು ದಿನಗಳ ಮೊದಲೇ ಎಸ್​ಐಆರ್​ ಪೂರ್ಣಗೊಳಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದೇವೆ ಎಂದು ಸಂತಸ ವ್ಯಕ್ತ ಪಡಿಸಿದರು.
ಕ್ಷೇತ್ರದಲ್ಲಿ 263 ಮತಗಟ್ಟೆ ಹೊಂದಿದ್ದು, 2,43,811 ಮತದಾರರು ಇದ್ದಾರೆ. ಅದರಂತೆ ಮತಗಟ್ಟೆ ಮೇಲ್ವಚಾರಕರು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗೂ ಭೇಟಿ ಎಲ್ಲ ಮತದಾರರಿಗೆ ಎನ್ಯುಮರೇಫಿನ್​ ಫಾರಂ ನೀಡಿ ಸಂಪೂರ್ಣ ಗಣಕೀಕರಣಗೊಳಿಸಿ ರ್ನಿಧಿಷ್ಟ ಗುರಿ ಸಾಧಿಸಿದ್ದೇವೆ. ಕ್ಷೇತ್ರದಲ್ಲಿ ಇರುವ 2,43,811 ಮತದಾರರ ಎನ್ಯುಮರೇಷನ್​ ಫಾರಂ ಗಣಕೀಕರಣಗೊಳಿಸಲಾಗಿದೆ. ಅದರಲ್ಲಿ 19828 ಮತದಾರರು ಸ್ಥಳಾಂತರಗೊಂಡಿದ್ದು, 4973 ಮತದಾರರು ಮೃತರಾಗಿದ್ದಾರೆ. 4962 ಮತದಾರರು ಗೈರಾಗಿದ್ದು, 2468 ದ್ವಿಪ್ರತಿ ಮತದಾರರು, ಇತರೆ 118 ಸೇರಿ ಒಟ್ಟು 32349 ಮತದಾರರು ಮತ ಪಟ್ಟಿಯಿಂದ ಡಿಲೀಟ್​ ಆಗುವ ಸಾಧ್ಯತೆಯಿದೆ ಎಂದರು.
ಆದರೆ, ಅರ್ಹ ಮತದಾರರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆಯಿಲ್ಲ. ಆಕ್ಷೇಪಣೆ ಸಲ್ಲಿಸಲು ಮತ್ತು ಹೊಸ ಸೇರ್ಪಡೆಗೆ ಅವಕಾಶ ಇದ್ದು ಅರ್ಹ ಮತದಾರರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಚುನಾವಾಣಾ ನೋಂದಣಾಧಿಕಾರಿ ಶಂಕರ ಖಾದಿ, ತಾಲೂಕು ಕಾಂಗ್ರೆಸ್​ ಅಧ್ಯಕ್ಷ ಹಣಮಂತರಾವ ಚವ್ಹಾಣ್​, ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ತಾಲೂಕು ಜೆಡಿಎಸ್​ ಅಧ್ಯಕ್ಷ ಮಲ್ಲಿಕಾರ್ಜುನ ನೇಳಗೆ, ಬಾಬುರಾವ ಧೂಪೆ ಇತರರಿದ್ದರು.
"

ಭಾಲ್ಕಿ ಕ್ಷೇತ್ರದಲ್ಲಿ ನಿಗದಿತ ಸಮಯಕ್ಕಿಂತ ಎರಡ್ಮೂರು ದಿನ ಮೊದಲೇ ಎಸ್​ಐಆರ್​ ಸಮೀಕ್ಷೆ ಪೂರ್ಣಗೊಳಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ. ಚುನಾವಣಾ ನೋಂದಣಾಧಿಕಾರಿ, ಮತದಾರರು, ಸಾರ್ವಜನಿಕರು, ಮತಗಟ್ಟೆ ಮೇಲ್ವಿಚಾರಕರು, ಮತಗಟ್ಟೆ ಅಧಿಕಾರಿಗಳು, ಜನಪ್ರತಿಧಿಗಳು, ಎಲ್ಲ ಪಕ್ಷದ ಏಜೆಂಟರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಸಹಕಾರ ನೀಡಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು.

— - > ಮಲ್ಲಿಕಾರ್ಜುನ ವಡ್ಡನಕೇರಿ ತಹಸೀಲ್ದಾರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net