20ರಂದು ದೀಪೋತ್ಸವ

 ಖನಗಾವಿ ಗ್ರಾಮದ ಖನ್ನಮ್ಮದೇವಿ ದೇವಸ್ಥಾನದಲ್ಲಿ ನ.19ರಿಂದ 21ರ ವರೆಗೆ ಕಾರ್ತಿಕ ಮಹೋತ್ಸವ ಜರುಗಲಿದೆ.
ಖನಗಾವಿ ಗ್ರಾಮದ ಖನ್ನಮ್ಮದೇವಿ ದೇವಸ್ಥಾನದಲ್ಲಿ ನ.19ರಿಂದ 21ರ ವರೆಗೆ ಕಾರ್ತಿಕ ಮಹೋತ್ಸವ ಜರುಗಲಿದೆ.
Published on
ಮಮದಾಪುರ: ಖನಗಾವಿ ಗ್ರಾಮದ ಖನ್ನಮ್ಮದೇವಿ ದೇವಸ್ಥಾನದಲ್ಲಿ ನ.19ರಿಂದ 21ರ ವರೆಗೆ ಕಾರ್ತಿಕ ಮಹೋತ್ಸವ ಜರುಗಲಿದೆ. 19ರಂದು ಸಂಜೆ 6 ಗಂಟೆಗೆ 101 ಡೊಳ್ಳಿನ ವಾಲಗಗಳ ಆಗಮನ, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಡೊಳ್ಳಿನ ಪದಗಳ ಗಾಯನ ಹಾಗೂ ಡೊಳ್ಳಿನ ವಾಲಗ ನಡೆಯಲಿದೆ. 20ರಂದು ದೇವಿ ಗದ್ದುಗೆಗೆ ಮಹಾಪೂಜೆ ನೆರವೇರಲಿದೆ. ಸಂಜೆ ಪಲ್ಲಕ್ಕಿ ಉತ್ಸವ, ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೇವಿಗೆ ಮಂಗಳಾರತಿ, ದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ರಾತ್ರಿ 10.30ಕ್ಕೆ ಸಂಗ್ಯಾ&ಬಾಳ್ಯಾ ಬೈಲಾಟ ಪ್ರದರ್ಶನಗೊಳ್ಳಲಿದೆ. 21ರಂದು ಬೆಳಗ್ಗೆ 8ಕ್ಕೆ ಭಂಡಾರ ಉತ್ಸವ ಬಳಿಕ ದೇವಿಯ ವಾಣಿಯೊಂದಿಗೆ ಕಾರ್ತಿಕ ಮಹೋತ್ಸವ ಸಂಪನ್ನಗೊಳ್ಳಲಿದೆ. ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಡಿಸಿಸಿ ಬ್ಯಾಂಕ್​ ನಿರ್ದೇಶಕ ಅಮರನಾಥ ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net