ಖರೀದಿ ಕೇಂದ್ರ ತೆರೆಯಲಿ

ರೈತರಿಗೆ ಬೆಳೆ ಹಾನಿ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್​ ಸಂ ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳಗೆ ಮನವಿ ಸಲ್ಲಿಸಿತು. ಬಸವರಾಜ ಕೋಣನ್ನವರ, ಸುರೇಶ ನಂದೆಪ್ಪನವರ, ನಿಂಗಪ್ಪ ಗುದಗಿ ಇತರರಿದ್ದರು.
ರೈತರಿಗೆ ಬೆಳೆ ಹಾನಿ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್​ ಸಂ ತಹಸೀಲ್ದಾರ್​ ಪ್ರಕಾಶ ಹೊಳೆಪ್ಪಗೋಳಗೆ ಮನವಿ ಸಲ್ಲಿಸಿತು. ಬಸವರಾಜ ಕೋಣನ್ನವರ, ಸುರೇಶ ನಂದೆಪ್ಪನವರ, ನಿಂಗಪ್ಪ ಗುದಗಿ ಇತರರಿದ್ದರು.
Published on
ರಾಮದುರ್ಗ:ಹಿಂಗಾರು ಬೆಳೆಗಳಿಗೆ ನೀರಿನ ಅವಶ್ಯಕತೆಯಿದ್ದು, ಮಲಪ್ರಭಾ ಎಡದಂಡೆ ಕಾಲುವೆಯಿಂದ ಬಾಳೇಕುಂದ್ರಿ ನಾಲೆಗೆ ನೀರು ಹರಿಸಬೇಕು. ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ, ಬೆಳೆ ನಷ್ಟಕ್ಕೆ ಶ್ರೀ ಪರಿಹಾರ ನೀಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್​ ಸಂದ
ತಾಲೂಕು ಟಕದ ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್​ ಮೂಲಕ ಜಿಲ್ಲಾಧಿಕಾರಿಗಳಿಗೆ
ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆಯಾಗಿದ್ದು, ಬೆಳೆಹಾನಿಯಾಗಿ ರೈತ ಸಮುದಾಯ ಸಂಕಷ್ಟದಲ್ಲಿದೆ. ಕ್ವಿಂಟಾಲ್​ಗೆ 2,400 ರೂ. ಎಂಎಸ್​ಪಿ ಇರುವ ಗೋವಿನ ಜೋಳವನ್ನು ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳು 1,600 ರೂ.ರಿಂದ 1,800 ರೂ. ನೀಡಿ ಖರೀದಿಸುತ್ತಿದ್ದಾರೆ. ಅದರಂತೆ ಕ್ವಿಂಟಾಲ್​ಗೆ 8,200 ರೂ. ಹತ್ತಿಯನ್ನು 6,800 ರಿಂದ 7,200 ರೂ. ನೀಡಲಾಗುತ್ತದೆ. ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಬೆಂಬಲ ಬೆಲೆ ಯೋಜನೆಯಡಿ ಗೋವಿನಜೋಳ, ಹತ್ತಿ ಖರೀದಿ ಕೇಂದ್ರವನ್ನು ಸರ್ಕಾರ ಹೋಬಳಿ ಕೇಂದ್ರಗಳಲ್ಲಿ ತೆರೆಯಬೇಕು. ಜತೆಗೆ ಮಳೆಯಿಂದಾದ ಬೆಳೆಗೆ ಶ್ರೀ ನಷ್ಟ ಪರಿಹಾರ ಒದಗಿಸಬೇಕು. ಇಲ್ಲವಾದರೆ ಭಾರತೀಯ ಕಿಸಾನ್​ ಸಂದ ನೇತೃತ್ವದಲ್ಲಿ ರೆತರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂದ ಜಿಲ್ಲಾ ಉಪಾಧ್ಯ ಬಸವರಾಜ ಕೋಣನ್ನವರ, ತಾಲೂಕಾಧ್ಯ ಸುರೇಶ ನಂದೆಪ್ಪನವರ, ಪದಾಧಿಕಾರಿಗಳಾದ ನಿಂಗಪ್ಪ ಗುದಗಿ, ಅಪು$್ಪ ಪಾಟೀಲ, ಯಲ್ಲಪ್ಪ ದೊಡಮನಿ, ಭೀಮಪ್ಪ ಕಡ್ಡೆನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net