

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಕಳೆದುಹೋದ ಅಥವಾ ಕಳ್ಳತನವಾದ ಮೊಬೈಲ್ ಪತ್ತೆಹಚ್ಚಿ ವಾರಸುದಾರರಿಗೆ ಹಿಂತಿರುಗಿಸುವಲ್ಲಿ ದೇಶದಲ್ಲಿಯೇ ಕರ್ನಾಟಕ ಪೊಲೀಸ್ ಮೊದಲ ಸ್ಥಾನದಲ್ಲಿದೆ.
ಪೊಲೀಸ್ ವರದಿ ಪ್ರಕಾರ ಬೆಂಗಳೂರು ನಗರದಲ್ಲಿ ಪ್ರತಿದಿನ ಅಂದಾಜು 40-50 ಮೊಬೈಲ್‌ಗಳು ಕಳ್ಳತನವಾಗುತ್ತಿವೆ. ರಸ್ತೆಬದಿ ಸಂಭಾಷಣೆನಿರತ ಪಾದಚಾರಿ, ಬಸ್‌ಗಳಲ್ಲಿ ಜೇಬು ಕಳ್ಳತನ, ಸುಲಿಗೆ, ದರೋಡೆ, ಗಮನ ಬೇರೆಡೆ ಸೆಳೆದು ಎಗರಿಸುವುದು ಹಾಗೂ ನಾನಾ ಸನ್ನಿವೇಶದಲ್ಲಿ ಮೊಬೈಲ್ ಕಳವಾಗುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಿಸದೆ ನಮ್ಮ ಮೊಬೈಲ್ ಪತ್ತೆ ಮಾಡಲು ಕೇಂದ್ರ ಗೃಹ ಸಚಿವಾಲಯ ಜಾರಿಗೆ ತಂದಿರುವ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆ್ಯಪ್ (ಸಿಇಐಆರ್) ಪೋರ್ಟಲ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ದೇಶದಲ್ಲಿ 24,61,615 ಮೊಬೈಲ್ ಬ್ಲಾಕ್ ಮಾಡಲಾಗಿದೆ. ಈ ಪೈಕಿ 14,73,405 ೆನ್‌ಗಳನ್ನು ಪತ್ತೆಹಚ್ಚಿ 2,85,624 ಮೊಬೈಲ್‌ಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ವಾಪಸ್ ನೀಡಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ 3.10 ಲಕ್ಷ ಮೊಬೈಲ್‌ಗಳನ್ನು ಸಿಇಐಆರ್ ಪೋರ್ಟಲ್‌ನಲ್ಲಿ ವರದಿ ಮಾಡಿದ್ದು, 1.62 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. 60,210 ಮೊಬೈಲ್‌ಗಳನ್ನು ಜಪ್ತಿ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ಒಪ್ಪಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6,79,101 ಮೊಬೈಲ್‌ಗಳನ್ನು ಬ್ಲಾಕ್ ಮಾಡಿದ್ದು 4,32,758 ಪತ್ತೆಯಾಗಿವೆ. ಆದರೆ, ಕೇವಲ 6,984 ೆನ್‌ಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ನೀಡುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಅತೀ ಹೆಚ್ಚು ಮೊಬೈಲ್ ಕಳವಾಗಿರುವ ಬಗ್ಗೆ ವರದಿ ಆಗಿ ಟ್ರೇಸ್ ಆಗಿದ್ದರೂ ಜಪ್ತಿ ಮಾಡುವಲ್ಲಿ ದೆಹಲಿ ಪೊಲೀಸರು ವಿಲವಾಗಿರುವುದು ವರದಿಯಿಂದ ತಿಳಿಯಲಿದೆ.
ಆನ್‌ಲೈನ್ ದೂರು ಹೇಗೆ
ಮೊಬೈಲ್ ಕಳವಾದರೆ ಅಥವಾ ಕಳ್ಳತನವಾದರೆ ರಾಜ್ಯ ಪೊಲೀಸ್ ಇಲಾಖೆಯ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಿ ಸ್ವೀಕೃತಿ ಪಡೆಯಬೇಕು. ಮೊಬೈಲ್‌ನಲ್ಲಿ ಬಳಸುತ್ತಿದ್ದ ಸಿಮ್ ಕಾರ್ಡ್ ಹೊಸದಾಗಿ ಪಡೆದು ಆಕ್ಟೀವ್ ಮಾಡಿ ಮತ್ತು ಮೊಬೈಲ್ ಐಎಂಇಐ ನಂಬರ್, ಆಧಾರ್ ಇಟ್ಟುಕೊಳ್ಳಬೇಕು.
ಇದಾದ ಮೇಲೆ ಸಿಇಐಆರ್ ಪೋರ್ಟಲ್‌ಗೆ ಮೊಬೈಲ್ ಮೊಡೆಲ್, ಐಎಂಇಐ ನಂಬರ್ ಸೇರಿ ಒಂದೊಂದಾಗಿ ಮಾಹಿತಿ ಅಪ್‌ಲೋಡ್ ಮಾಡುವುದರ ಜತೆಗೆ ಆಧಾರ್, ಇ-ಲಾಸ್ಟ್ ದೂರಿನ ಪ್ರತಿ ಸಲ್ಲಿಸಬಹುದು.
ಕಳವಾದ ಮೊಬೈಲ್ ಐಎಂಇಐ ನಂಬರ್ ಮತ್ತು ಸಿಮ್‌ಗೆ ಲಿಂಕ್ ಆಗಿ ಮೊಬೈಲ್ ಲಾಕ್ ಆಗಲಿದ್ದು, ಹೊಸ ಸಿಮ್ ಅಳವಡಿಸಿದ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆ ನೋಡಲ್ ಅಧಿಕಾರಿಗೆ ಮಾಹಿತಿ ಹೋಗಲಿದೆ. ಸಿಮ್ ಯಾರ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ವಿಳಾಸ, ಆ ಸಿಮ್‌ನಿಂದ ಯಾರೆಲ್ಲರಿಗೆ ಕಾಲ್ ಹೋಗಿದೆ ಎಂಬ ಮಾಹಿತಿ ನೋಡೆಲ್ ಅಧಿಕಾರಿಗೆ ಸಿಗಲಿದೆ. ಮೊಬೈಲ್ ಪತ್ತೆಹಚ್ಚಿ ವಾರಸುದಾರರಿಗೆ ನೀಡಲಾಗುತ್ತಿದೆ. ಈ ಮಾಹಿತಿ ದೂರುದಾರನ ಮೊಬೈಲ್‌ಗೂ ಬರಲಿದ್ದು, ಕೈ ಸೇರಿದ ಮೇಲೆ ಮೊಬೈಲ್ ಅನ್‌ಬ್ಲಾಕ್ ಮಾಡಿಕೊಂಡು ಬಳಸಬಹುದಾಗಿದೆ.
ಮಧ್ಯಪ್ರದೇಶ 59,660 38,011 9,934
ಗುಜರಾತ್ 59,626 35,280 10,069
ಚಂಢೀಘರ್ 57,750 39,740 12,634
ರಾಜಸ್ಥಾನ 67,135 44,332 14,619
ತಮಿಳುನಾಡು 88,864 50,627 15,214
ಉತ್ತರ ಪ್ರದೇಶ 1,18,019 74,457 16,031
ಆಂಧ್ರಪ್ರದೇಶ 78,778 48,028 16,159
ಮಹಾರಾಷ್ಟ್ರ 3,29,339 1,79,267 29,810
ತೆಲಂಗಾಣ 2,62,130 1,44,400 55,266
ಕರ್ನಾಟಕ 3,10,467 1,62,740 60,208
ರಾಜ್ಯ ಬ್ಲಾಕ್ ಪತ್ತೆ ಜಪ್ತಿ
ಮೊಬೈಲ್ ಬ್ಲಾಕ್, ಪತ್ತೆ, ಜಪ್ತಿ ಮಾಡಿದ ಮೊದಲ 10 ರಾಜ್ಯಗಳ ಪಟ್ಟಿ