

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ದಾಖಲೆಯ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಕಾಂಗ್ರೆಸ್ನ ಚುನಾವಣಾಪೂರ್ವ ಗ್ಯಾರಂಟಿ ಜಾರಿಯ ಸವಾಲು ಒಂದೆಡೆಯಾದರೆ, ಗ್ಯಾರಂಟಿ ನಡುವೆ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಅನುದಾನ ಹಂಚಿಕೆಯ ಸವಾಲು ಇನ್ನೊಂದೆಡೆ. ಈ ಎರಡನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರು ಹೇಗೆ ಸಮತೋಲಿತ ಬಜೆಟ್ ಮಂಡಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಬಜೆಟ್ ಕುರಿತ ಕ್ಷಣದ ಕ್ಷಣದ ಮಾಹಿತಿಯನ್ನು ಆರ್ಥಿಕ ಹಾಗೂ ರಾಜಕೀಯ ಪರಿಣಿತರ ಚರ್ಚೆ ಮತ್ತು ವಿಶ್ಲೇಷಣೆಯೊಂದಿಗೆ ಈ ಕೆಳಗಿನ ದಿಗ್ವಿಜಯ ನ್ಯೂಸ್ 24×7 ಫೇಸ್ಬುಕ್ ಪೇಜ್ ಲೈವ್ನಲ್ಲಿ ವೀಕ್ಷಿಸಬಹುದಾಗಿದೆ.
ಕಾಂಗ್ರೆಸ್ನ ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಸಂಗ್ರಹದ ಒತ್ತಡದ ನಡುವೆಯೇ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಹದಿನಾಲ್ಕನೇ ಬಜೆಟ್ನಲ್ಲಿ ಯಾವ ರೀತಿಯ ಸರ್ಕಸ್ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ.
ಚುನಾವಣೆಗೂ ಮುನ್ನ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್ನ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಈಗ ಎಂಟು ತಿಂಗಳ ಮಟ್ಟಿಗೆ ಹೊಸ ಬಜೆಟ್ ರೂಪಿಸಿದ್ದಾರೆ. ಈಗಾಗಲೇ ಮಂಡಿಸಿರುವ ಬಜೆಟ್ ಜತೆಗೆ ಸಂಪನ್ಮೂಲಕ್ಕೆ ಬೇರೆ ಬೇರೆ ಮಾರ್ಗಗಳನ್ನು ತೆರೆದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿಯೇ ಪ್ರಯತ್ನಗಳಾಗಿವೆ ಎಂದು ಹೇಳಲಾಗುತ್ತಿದೆ.