ಇದು ಹೀಗೆ ಮುಂದುವರಿದರೆ 'ಪುಷ್ಪ 2' ರಿಲೀಸ್​ ಮತ್ತಷ್ಟು ವಿಳಂಬ! ಅಲ್ಲು ಅರ್ಜುನ್ ಫ್ಯಾನ್ಸ್​ಗೆ ತಪ್ಪದ ಬೇಸರ

star heroines
Published on

ಆಂಧ್ರಪ್ರದೇಶ: ಈ ವರ್ಷ ತೆರೆಕಾಣಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಟಾಲಿವುಡ್​ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ (Allu Arjun)​ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಸದ್ಯ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದು, ಬಿಡುಗಡೆಗೂ ಮುನ್ನವೇ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಈ ಮಧ್ಯೆ ಕಳೆದ ಹಲವು ತಿಂಗಳುಗಳಿಂದ ಚಿತ್ರದ ವಿಶೇಷ ಹಾಡಿಗೆ ಯಾವ ನಟಿಯೂ ಸಿಗುತ್ತಿಲ್ಲ ಎಂದು ಚಿತ್ರತಂಡ ಕಂಗಾಲಾಗಿದೆ. ಸ್ಪೆಷಲ್ ಸಾಂಗ್​ನಲ್ಲಿ (Special Song) ಹಾಟ್​ ಲುಕ್​ನಲ್ಲಿ ಕುಣಿಯಲು ಯಾವ ನಟಿಯೂ ಒಪ್ಪದ ಕಾರಣ ಚಿತ್ರೀಕರಣವು ಇದೀಗ ದಿನದಿಂದ ದಿನಕ್ಕೆ ಮುಂದೂಡಿಕೆಯಾಗುತ್ತಿದೆ. ಇತ್ತೀಚೆಗಷ್ಟೇ ಚಿತ್ರತಂಡ ಬಾಲಿವುಡ್​ ಸೆನ್ಸೇಷನ್​ ನಟಿ ತೃಪ್ತಿ ದಿಮ್ರಿಯನ್ನು ನಟಿಸುವಂತೆ ಒಂದೊಳ್ಳೆ ಆಫರ್​ ನೀಡಿತ್ತು. ಆದ್ರೆ, ಈ ಆಫರ್​ ಅನ್ನು ತಿರಸ್ಕರಿಸಿದ ತೃಪ್ತಿ, ನಾನು ಅಭಿನಯಿಸಲ್ಲ ಎಂದು ನೇರವಾಗಿ ಹೇಳಿದ್ದರು. ಇದೀಗ ಮೊತ್ತೊಬ್ಬ ಸ್ಟಾರ್​ ನಟಿ ಈ ಅವಕಾಶ ನನಗೆ ಬೇಡ ಎಂದು ರಿಜೆಕ್ಟ್ ಮಾಡಿದ್ದು, ಸೂಕ್ತ ಕಾರಣವನ್ನು ಕೂಡ ತಿಳಿಸಿದ್ದಾರೆ.

'ಪುಷ್ಪ 2' ಚಿತ್ರತಂಡ ಸ್ಪೆಷಲ್ ಸಾಂಗ್​ನಲ್ಲಿ ಕಾಣಿಸಿಕೊಳ್ಳುವಂತೆ ಬಾಲಿವುಡ್ ನಟಿ ಜಾಹ್ನವಿ ಕಪೂರ್​ರನ್ನು ಕೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟಾರ್​ ನಟಿ, "ಈ ಹಿಂದೆ 'ದೇವರ' ಚಿತ್ರದ ಪೂರ ನೀವು ಇರುತ್ತೀರಿ ಎಂದು ಹೇಳಿದ್ದರು. ಆದ್ರೆ, ಹಾಡುಗಳಲ್ಲಿಯೇ ನಾನು ಹೆಚ್ಚು ಕಾಣಿಸಿಕೊಂಡಿದ್ದೇನೆ. ಇನ್ನು ಪುಷ್ಪ 2 ಚಿತ್ರದ ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ರೆ, ಖಂಡಿತ ನನ್ನನ್ನು ಇಂತಹ ಹಾಡುಗಳಿಗೆ ಬ್ರ್ಯಾಂಡ್​ ಮಾಡಿಬಿಡುತ್ತಾರೆ. ಹೀಗಾಗಿ ಸ್ಪೆಷಲ್ ಸಾಂಗ್​ಗಳನ್ನು ಮಾಡದಿರಲು ನಾನು ನಿರ್ಧರಿಸಿದ್ದೇನೆ" ಎಂದು ಬಿಗ್ ಆಫರ್​ ಅನ್ನು ತಿರಸ್ಕರಿಸಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾದ ಬಹುತೇಕ ಭಾಗಗಳ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಸ್ಪೆಷಲ್ ಸಾಂಗ್ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಆದ್ರೆ, ಈ ಹಾಡಿನಲ್ಲಿ ಹೆಜ್ಜೆ ಹಾಕಲು ಯಾವ ನಟಿಮಣಿಯರು ಮುಂದೆ ಬರದೆ ಇರುವುದು ಇದೀಗ ಚಿತ್ರತಂಡವನ್ನು ಭಾರೀ ಗೊಂದಲಕ್ಕೆ ದೂಡಿದೆ. ಈ ಹಿಂದೆ ಭಾಗ 1ರಲ್ಲಿ ನಟಿ ಸಮಂತಾ 'ಊ ಅಂಟಾವ, ಊಹು ಅಂಟಾವ' ಹಾಡಿಗೆ ಮೈಬಳುಕಿಸಿ, ಪ್ರೇಕ್ಷಕರ ಮನಗೆದ್ದಿದ್ದರು ಹಾಗೂ ಸಾಂಗ್​ ಸೂಪರ್​ಹಿಟ್ ಆಗಲು ಕಾರಣರಾಗಿದ್ದರು. ಆದರೆ, ಈ ಬಾರಿ ಆ ರೀತಿ ಆಗುವುದು ಅದ್ಯಾಕೋ ಅನುಮಾನ ಎಂದೇ ಊಹಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net