2 ತಿಂಗಳ ಬಳಿಕ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು

hubli
Published on

ಹುಬ್ಬಳ್ಳಿ: ಕರೊನಾ ಲಾಕ್​ಡೌನ್ ಕಾರಣ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಸಂಚಾರ ಸೋಮವಾರ ಪುನರಾರಂಭಗೊಂಡಿದ್ದು, ಬೆಂಗಳೂರಿಂದ ಹುಬ್ಬಳ್ಳಿಗೆ ಬಂದ ಸ್ಟಾರ್ ಏರ್‌ವೇಸ್ ವಿಮಾನದಲ್ಲಿ 7 ಪ್ರಯಾಣಿಕರು ಬಂದಿಳಿದರು.

ದೇಶೀಯ ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನ ಹಾರಾಟ ನಡೆಸಿತು. ಮೊದಲ ವಿಮಾನದಲ್ಲಿ ಬಂದ 7 ಪ್ರಯಾಣಿಕರ ಪೈಕಿ ನಾಲ್ವರನ್ನು ಹೋಟೆಲ್​ ಕ್ವಾರಂಟೈನ್ ಹಾಗೂ ಮೂವರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಇನ್ನು ಹುಬ್ಬಳ್ಳಿಯಿಂದ ದೆಹಲಿಗೆ (ಹಿಂಡಾನ್‌ಗೆ) 30 ಜನರು ಪ್ರಯಾಣಿಸಿದರು.

ವಿಮಾನ ನಿಲ್ದಾಣ ಸಿಬ್ಬಂದಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಷನ್ ನಡೆಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿ, ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ವ್ಯಕ್ತಿಯ ಕೈಗೆ ಸೀಲ್ ಹಾಕಿ ಹೋಟೆಲ್ ಕ್ವಾರಂಟೈನ್​ಗೆ ಜಿಲ್ಲಾಡಳಿತ ಕಳುಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net