ಸೀರೆಯುಟ್ಟು ಕಾಣಿಸಿಕೊಂಡ ಸ್ಟಾರ್​ ನಟ; ಅರೇ ಏನಾಯ್ತು ಎಂದ ನೆಟ್ಟಿಗರು

Saree
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್: ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ, ಸುಕುಮಾರ್​ ನಿರ್ದೇಶನದ ಬಹು ನಿರೀಕ್ಷಿತ ಪುಷ್ಪ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಈವರೆಗೆ ಸಿನಿಮಾದ ಬಿಡುಗಡೆ ದಿನಾಂಕ, ಫಸ್ಟ್​ ಲುಕ್​ ಹಾಗೂ ಟೀಸರ್​ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದೀಗ ಚಿತ್ರದ ಬಗೆಗಿನ ಮೇಜರ್​ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಗರಿಗೆದರಿದೆ.

ಈ ಹಿಂದೆ ಚಿತ್ರತಂಡ ಅಲ್ಲು ಅರ್ಜುನ್​ ಗಂಗಮ್ಮ ತಲ್ಲಿ ಕಾಸ್ಟ್ಯೂಮ್​ನಲ್ಲಿರುವ ಪೋಸ್ಟರ್​ ಒಂದನ್ನು ಚಿತ್ರತಂಡ ಹಂಚಿಕೊಂಡಿತ್ತು. ಆ ಲುಕ್​ ಸಖತ್​ ವೈರಲ್​ ಆಗಿತ್ತು ಮತ್ತು ಅಭಿಮಾನಿಗಳ ಕುತೂಹಲವನ್ನು ಕೆರಳಿಸಿತ್ತು. ಇದೀಗ ಶೂಟಿಂಗ್​ ಸೆಟ್​ನಿಂದ ಫೋಟೋ ಒಂದು ವೈರಲ್​ ಆಗಿದೆ. ಸೀರೆಯುಟ್ಟು ಅಲ್ಲು ಅರ್ಜುನ್​ ಚೇರ್​ ಮೇಲೆ ಕುಳಿತುಕೊಂಡಿರುವ ಪೋಟೋ ಒಂದು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Pushpa 2

ಪುಷ್ಪ-2 ಚಿತ್ರಕ್ಕೆ ಸಂಬಂಧಿಸಿದಂತೆ ಶೂಟಿಂಗ್​ ಸೆಟ್​ನಿಂದ ಯಾವುದೇ ಮಾಹಿತಿ ಹೊರಬಾರದಂತೆ ಚಿತ್ರತಂಡ ಎಚ್ಚರ ವಹಿಸಿದ್ದರು ಇದೀಗ ಈ ಪೋಟೋ ಲೀಕ್​ ಆಗಿದ್ದು, ಒಂದು ವೇಳೆ ಈ ಫೋಟೋವನ್ನ ಚಿತ್ರತಂಡವೇ ಬೆಂಕಂತಲೇ ಲೀಕ್​ ಮಾಡಿದೆಯಾ ಅಥವಾ ಯಾರಾದರೂ ಖಾಸಗಿ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರಾ ಎಂದು ಈವರೆಗೆ ತಿಳಿದು ಬಂದಿಲ್ಲ.

2021ರ ಅಂತ್ಯದಲ್ಲಿ ಬಿಡುಗಡೆ ಆಗಿದ್ದ ಪುಷ್ಪ ಸಿನಿಮಾ ಕೋವಿಡ್ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಇರುವ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಚಿತ್ರರಂಗಕ್ಕೆ ಪರಿಚಯಿಸಿತ್ತು. ಸಿನಿಮಾ ಸಹ ದೊಡ್ಡ ಹಿಟ್ ಆಗಿದ್ದಲ್ಲದೆ, ಅಲ್ಲು ಅರ್ಜುನ್​ಗೆ ರಾಷ್ಟ್ರಪ್ರಶಸ್ತಿಯನ್ನು ಸಹ ತಂದುಕೊಟ್ಟಿತು. ಇದೇ ಕಾರಣಕ್ಕೆ ಹೆಚ್ಚಿನ ಕಾಳಜಿಯಿಂದ ಪುಷ್ಪ 2 ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net