

ಸುಬ್ರಹ್ಮಣ್ಯ: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ವಿದ್ಯಾರ್ಥಿ ಎ.ಎಲ್. ಅನುಷ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಇಂದು ಪ್ರಕಟವಾದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 625-625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಅನುಷ್ಗೆ ಅರಣ್ಯಾಧಿಕಾರಿ ಆಗುವ ಹೆಬ್ಬಯಕೆ ಇದೆ. ವಿಜಯವಾಣಿ ಜತೆ ಮಾತನಾಡಿದ ಅವರು, 'ಗ್ರಾಮೀಣ ಭಾಗದಲ್ಲಿ ಬೆಳೆದಿರುವ ನನಗೆ ಪರಿಸರದ ಬಗ್ಗೆ ಹೆಚ್ಚು ಆಸಕ್ತಿ. ಮುಂದೆ ಐಎಫ್ಎಸ್ ಮಾಡಿ ಅರಣ್ಯಾಧಿಕಾರಿಯಾಗಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವೆ' ಎಂದು ತಮ್ಮ ಮುಂದಿನ ಗುರಿ ಬಗ್ಗೆ ಬಿಚ್ಚಿಟ್ಟರು.
ಇದನ್ನೂ ಓದಿರಿ ಸರ್ಕಾರಿ ಶಾಲೆಯ ಸನ್ನಿಧಿ ಎಸ್ಎಸ್ಎಲ್ಸಿ ಟಾಪರ್
'620ಕ್ಕಿಂತ ಅಧಿಕ ಅಂಕ ಸಿಗಬಹುದೆಂದು ಅಂದಾಜಿಸಿದ್ದೆ. ಆದರೆ, 625 ಅಂಕ ಬಂದಿರುವುದು ತುಂಬ ಖುಷಿಯಾಗಿದೆ. ನಾನು ಯಾವುದೇ ಕೋಚಿಂಗ್
'ಕರೊನಾ ಲಾಕ್ಡೌನ್ ಅವಧಿಯಲ್ಲಿ ಶಾಲೆಯಿಂದ ಉತ್ತಮ ಪ್ರೋತ್ಸಾಹ ಸಿಕ್ಕಿತ್ತು. ಶಿಕ್ಷಕರು ಫೋನ್ ಮೂಲಕ ಉತ್ತೇಜನ ನೀಡುತ್ತಿದ್ದರು. ಇದರಿಂದಾಗಿ ರಜಾ ಅವಧಿಯಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಸಾಧ್ಯವಾಯಿತು. ತಂದೆ ಮತ್ತುತಾಯಿಯಿಂದಲೂ ಉತ್ತಮ ಸಹಕಾರ ಸಿಕ್ಕಿದೆ. ಓದುವಂತೆ ಯಾರಿಂದಲೂ ಒತ್ತಡ ಇರಲಿಲ್ಲ. ನಿತ್ಯ ಕೆಲ ಸಮಯ ಟಿವಿ ನೋಡುತ್ತಿದ್ದೆ' ಎಂದ ಅನುಷ್, 'ಆಸಕ್ತಿಯಿಂದ ಪಾಠ ಕೇಳಿ ಅದನ್ನು ಪುನರ್ ಮನನ ಮಾಡಿದರೆ ಸಾಕು' ಎಂದು ಯಶಸ್ಸಿನ ಟಿಪ್ಸ್ ನೀಡಿದರು. ಸಂಸದರ ಆದರ್ಶ ಗ್ರಾಮ ಬಳ್ಪದ ಎಣ್ಣೆಮಜಲು ನಿವಾಸಿ ಲೋಕೇಶ್ ಮತ್ತು ಉಷಾ ದಂಪತಿ ಪುತ್ರ ಅನುಷ್.