More

    ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

    ಬೆಂಗಳೂರು: 2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 6 ಮಕ್ಕಳು ರಾಜ್ಯಕ್ಕೆ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

    625ಕ್ಕೆ 625 ಅಂಕ ಪಡೆದ ಶಿರಸಿಯ ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸನ್ನಿಧಿ ಮಹಾಬಲೇಶ್ವರ ಹೆಗಡೆ, ಮಂಡ್ಯ ತಾಲೂಕಿನ ಮಾರದೇವನಹಳ್ಳಿ ಶ್ರೀ ಸತ್ಯಸಾಯಿ ಸರಸ್ವತಿ ಹೈಸ್ಕೂಲ್‌ನ ಎಂ.ಪಿ.ಧೀರಜ್ ರೆಡ್ಡಿ, ದಕ್ಷಿಣಕನ್ನಡ ಜಿಲ್ಲೆಯ ‌ಸುಳ್ಯ ತಾಲೂಕಿನ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್​ನ ಅನುಷ್ ಎ.ಎಲ್., ಬೆಂಗಳೂರಿನ ನಾಗಸಂದ್ರದ ಸೇಂಟ್​ ಮೇರಿಸ್​ ಶಾಲೆಯ ಚಿರಾಯು ಕೆ.ಎಸ್​., ಬೆಂಗಳೂರಿನ ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್​ ಸೆಂಟರ್​ನ ನಿಖಿಲೇಶ್​ ಎಂ. ಮರಳಿ, ಚಿಕ್ಕಮಗಳೂರಿನ ಸೇಂಟ್​ ಜೋಸೆಫ್​ ಕಾನ್ವೆಂಟ್ ಗಲ್ರ್ಸ್​​ ಹೈಸ್ಕೂಲ್​ನ ಐ.ಪಿ. ತನ್ಮಯಿ ಸೇರಿ ಆರು ಮಂದಿ ಎಸ್​ಎಸ್​ಎಲ್​ಸಿ ಫಲಿತಾಂಶದ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.

    ಇದನ್ನೂ ಓದಿರಿ ಎಸ್​ಎಸ್​ಎಲ್​ಸಿ ಟಾಪರ್​ ಧೀರಜ್​ ರೆಡ್ಡಿಗೆ ಲಾಕ್​ಡೌನ್​ ಸಮಯವೇ ವರವಾಯ್ತು!

    ಇನ್ನು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದ 11 ವಿದ್ಯಾರ್ಥಿಗಳು ಎರಡನೇ ಸ್ಥಾನವನ್ನು ಸಮವಾಗಿ ಅಂಚಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅನಿರುದ್ಧ ಸುರೇಶ್​ ಗುಟ್ಟಿಕಾರ್​, ಬೆಂಗಳೂರು ಉತ್ತರ ವಿವಿಎಸ್​ ಸರ್ದಾರ್​ ಪಟೇಲ್​ ಆಂಗ್ಲ ಮಾಧ್ಯಮ ಶಾಲೆಯ ಜಿ.ಕೆ.ಅಮೋಘ್​ ಮತ್ತು ಪ್ರಣವ್​ ವಿಜಯ್​ ನಾಡಿಗೇರ್​, ಬೆಂಗಳೂರಿನ ಸದಾಶಿವನಗರದ ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆಯ ಎಂ.ಡಿ.ವೀಣಾ ಹಾಗೂ ನಿಹಾರಿಕಾ ಸಂತೋಷ್​ ಕುಲಕರ್ಣಿ, ಬೆಂಗಳೂರು ದಕ್ಷಿಣ ವಿಜಯನಗರದ ನ್ಯೂ ಕೇಂಬಿಡ್ಜ್​ ಶಾಲೆಯ ಎ.ಎಸ್​.ಸ್ಫೂರ್ತಿ, ತುಮಕೂರು ಜಿಲ್ಲೆಯ ಕುಣಿಗಲ್​ನ​ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಜಿ.ಎಂ.ಮಹೇಶ, ಉಡುಪಿಯ ಬೈಂದೂರು ಕಿರಿಮಂಜೇಶ್ವರದ ಸಂದೀಪ್ನಾ ಆಂಗ್ಲ ಮಾಧ್ಯಮ ಶಾಲೆಯ ಸುರಭಿ ಎಸ್​.ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶ್ರೀ ಸತ್ಯಸಾಯಿ ಲೋಕೇಶ್ವರ ಪ್ರೌಢ ಶಾಲೆಯ ಸುಮುಖ ಸುಬ್ರಹ್ಮಣ್ಯ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕೆನರಾ ಹೈಸ್ಕೂಲ್​ನ ನಿಧಿರಾವ್​, ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿ ಬಾಲಭವನ ಆಂಗ್ಲ ಮಾಧ್ಯಮ ಶಾಲೆಯ ಟಿ.ಎಸ್​. ಅಬ್ರಾಹಂ ಅವರು ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ಕಳೆದ ಬಾರಿಯೂ ಈ ಸ್ಥಾನವನ್ನು 11 ಮಂದಿ ಹಂಚಿಕೊಂಡಿದ್ದರು.

    ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ಮಂದಿ ರಾಜ್ಯಕ್ಕೆ ಟಾಪರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts