More

    ಎಸ್​ಎಸ್​ಎಲ್​ಸಿ ಟಾಪರ್​ ಧೀರಜ್​ ರೆಡ್ಡಿಗೆ ಲಾಕ್​ಡೌನ್​ ಸಮಯವೇ ವರವಾಯ್ತು!

    ಮಂಡ್ಯ: 2019-20ನೇ ಸಾಲಿನ ಎಸ್​ಎಸ್ಎಲ್​ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಮಂಡ್ಯ ತಾಲೂಕಿನ ಮಾರದೇವನಹಳ್ಳಿಯ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್‌ನ ವಿದ್ಯಾರ್ಥಿ ಎಂ.ಪಿ. ಧೀರಜ್ ರೆಡ್ಡಿ ಐಎಎಸ್ ಪಾಸ್​ ಮಾಡುವ ಕನಸನ್ನು ಬೆನ್ನತ್ತಿದ್ದಾರೆ.

    ಧೀರಜ್ ರೆಡ್ಡಿ ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದವರು. ಎಂ.ಪ್ರಭಾಕರ್ ರೆಡ್ಡಿ ಮತ್ತು ಕೆ.ಸಿ.ಮಂಜುಳಾ ದಂಪತಿಯ ದ್ವಿತೀಯ ಪುತ್ರರಾದ ಇವರು ಓದಿನ ಜತೆಗೆ ಕ್ರೀಡೆಯಲ್ಲೂ ಮುಂದು. ಫುಟ್ಬಾಲ್​ ಆಟಗಾರ ಕೂಡ ಹೌದು.

    ಇದನ್ನೂ ಓದಿರಿ ಎಸ್​ಎಸ್​ಎಲ್​ಸಿ ರಿಸಲ್ಟ್ ಪ್ರಕಟ: ಶೇ.71.80 ಫಲಿತಾಂಶ, 6 ಮಂದಿ ರಾಜ್ಯಕ್ಕೆ ಟಾಪರ್

    ಧೀರಜ್ ರೆಡ್ಡಿಯ ತಂದೆ ಮತ್ತು ತಾಯಿ ಇಬ್ಬರೂ ಶಿಕ್ಷಕರು. 1ರಿಂದ 8ನೇ ತರಗತಿವರೆಗೂ ಕ್ಯಾಸಂಬಳ್ಳಿ ಗ್ರಾಮದಲ್ಲೇ ಓದಿದ ಧೀರಜ್​, 9 ಮತ್ತು 10ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಮಂಡ್ಯದ ಮಾರದೇವನಹಳ್ಳಿಯ ವಸತಿ ಶಾಲೆಗೆ ಬಂದರು. ಈ ಶಿಕ್ಷಣ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ನದ್ದು.

    ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಟಾಪರ್​ ಆಗಿ ಹೊರಹೊಮ್ಮಿದ ಸಂತಸದ ಕ್ಷಣದಲ್ಲಿ ವಿಜಯವಾಣಿ ಜತೆ ಮಾತನಾಡಿದ ಧೀರಜ್​, ಸಾಧನೆಯ ರಹಸ್ಯ ಬಿಚ್ಚಿಟ್ಟರು. ‘ನಾನು ತರಗತಿ ಹೊರತಾಗಿ ಪತ್ರಿನಿತ್ಯ 2ರಿಂ4 ತಾಸು ಓದುತ್ತಿದ್ದೆ. ಕರೊನಾ ಆತಂಕದಲ್ಲಿ ಪರೀಕ್ಷೆ ಮುಂದೂಡಿಕೆ ಆಯ್ತು. ಮತ್ತಷ್ಟು ಅಭ್ಯಾಸ ಮಾಡಿ ಮನನ ಮಾಡಿಕೊಂಡೆ. ಲಾಕ್​ಡೌನ್​ ವೇಳೆ ಊರಿಗೆ ಹೋಗದೆ ಶಾಲೆಯಲ್ಲೇ ಉಳಿದಕೊಂಡಿದ್ದೆ. ಶಿಕ್ಷಕರೂ ನಮ್ಮೊಂದಿಗೆ ಇದ್ದರು. ಲಾಕ್​ಡೌನ್​ ಅನ್ನೇ ಓದಿಗೆ ಸದುಪಯೋಗ ಮಾಡಿಕೊಂಡದ್ದೇ ನನಗೆ ವರವಾಯ್ತು’ ಎಂದು ಹೇಳಿದರು.

    ಇದನ್ನೂ ಓದಿರಿ ಸರ್ಕಾರಿ ಶಾಲೆಯ ಸನ್ನಿಧಿ ಎಸ್​ಎಸ್​ಎಲ್​ಸಿ ಟಾಪರ್​

    ‘ಪರೀಕ್ಷೆಯನ್ನು ವಿಸಿಫಾರಂ ಕೇಂದ್ರದಲ್ಲಿ ಬರೆದೆ. ಭಾಷಾ ವಿಷಯಗಳಲ್ಲಿ ಒಂದೊಂದು ಅಂಕ ಕಡಿಮೆ ಆಗಬಹುದು ಅಂದುಕೊಂಡಿದ್ದೆ. ಆದರೆ, ಸಂಪೂರ್ಣ ಅಂಕ ಬರುವ ಮೂಲಕ ಮೊದಲ ಸ್ಥಾನ ಸಿಕ್ಕಿದ್ದು ತುಂಬಾ ಖುಷಿಯಾಗುತ್ತಿದೆ’ ಎಂದರು.

    ಈ ಬಾರಿ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಒಟ್ಟು 6 ಮಕ್ಕಳು ಮೊದಲ ಸ್ಥಾನ ಪಡೆದಿದ್ದು, ಈ ಪೈಕಿ ಧೀರಜ್​ ರೆಡ್ಡಿ ಕೂಡ ಒಬ್ಬರು.

    ಇವರೇ ಎಸ್​ಎಸ್​ಎಲ್​ಸಿ ಟಾಪರ್ಸ್, 625ಕ್ಕೆ 625 ಅಂಕ ಪಡೆದ ಸಾಧಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts