

ನವದೆಹಲಿ: ಪ್ರಸಕ್ತ ವರ್ಷ ನಡೆಯಲಿರುವ ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ಕ್ಷಮತೆ ಪರೀಕ್ಷೆಗಳಿಗೆ ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ)ವು ಪ್ರವೇಶ ಪತ್ರ ಬಿಡುಗಡೆಯಾಗಿದ್ದು, ಅಭ್ಯರ್ಥಿಗಳು ಸಶಸ್ತ್ರ ಸೀಮಾ ಬಲದ ವೆಬ್ಸೈಟ್ನಿಂದ ಪಡೆದುಕೊಳ್ಳಬಹುದು.
ನಾನ್ ಜಿಡಿ ವಿಭಾಗದ 1956 ಎಸ್ಐ, ಎಎಸ್ಐ, ಹೆಡ್ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು https://www.ssbrectt.gov.in./ ಗೆ ಲಾಗಿನ್ ಮಾಡಿಕೊಳ್ಳಬೇಕಿದೆ. ಜತೆಗೆ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಬೇಕಿದೆ. ಈ ವೇಳೆ ಪ್ರವೇಶ ಪತ್ರ ದೊರೆಯಲಿದ್ದು, ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬಹುದು.
ಕ್ರಮ ಸಂಖ್ಯೆ, ಪರೀಕ್ಷಾ ಕೊಠಡಿ ಹಾಗೂ ಪರೀಕ್ಷಾ ವಿವರಗಳ ಸಹಿತ ಪ್ರಮುಖ ಮಾಹಿತಿಗಳನ್ನು ಪ್ರವೇಶ ಪತ್ರ ಒಳಗೊಂಡಿದೆ. ಪರೀಕ್ಷೆ ವೇಳೆ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕಿದ್ದು, ಪರೀಕ್ಷೆಯು ಸೆ.29ರಿಂದ ಆರಂಭವಾಗಲಿದೆ.