ಶ್ರೀಶೈಲಂ ಜಲವಿದ್ಯುತ್​ ಘಟಕದಲ್ಲಿ ಭೀಕರ ಅಗ್ನಿದುರಂತ; 6 ಮಂದಿ ಸಾವು

Fire
Published on

ತೆಲಂಗಾಣ: ಶ್ರೀಶೈಲಂ ಜಲ​ವಿದ್ಯುತ್ ಸ್ಥಾವರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ, ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಹೊತ್ತಿಕೊಳ್ಳುವ ಸಂದರ್ಭದಲ್ಲಿ ಸ್ಥಾವರದಲ್ಲಿ ಒಟ್ಟು 9 ಮಂದಿ ಇದ್ದರು. ಆರು ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆಳೆದಿದ್ದು, ಇನ್ನು ಮೂವರಿಗಾಗಿ ಹುಡುಕುತ್ತಿದ್ದಾರೆ.

ಈ ಹೈಡ್ರೋ ಎಲೆಕ್ಟ್ರಿಕ್​ ಸ್ಥಾವರ ತೆಲಂಗಾಣ-ಆಂಧ್ರಪ್ರದೇಶದ ಗಡಿಭಾಗದಲ್ಲಿ ಇದೆ. ಸ್ಥಳದಲ್ಲಿ ವಿಪರೀತ ಹೊಗೆ ಆವರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಇದನ್ನೂ ಓದಿ: ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ; ತುಮಕೂರು ಜಿಲ್ಲೆಯಲ್ಲಿ ಗುರುವಾರ 117 ಕರೊನಾ ಪಾಸಿಟಿವ್

ಗುರುವಾರ ರಾತ್ರಿಯೇ ಬೆಂಕಿ ಕಾಣಿಸಿಕೊಂಡಿದ್ದರು ಅಲ್ಲಿನ ಹೊಗೆಯ ಕಾರಣದಿಂದ ಶುಕ್ರವಾರದವರೆಗೂ ಯಾರನ್ನೂ ರಕ್ಷಿಸಲು ಸಾಧ್ಯವಾಗಿಲ್ಲ. ಇಂದು ಬೆಳಗ್ಗೆ ಆರು ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net