ನಾಳೆಯಿಂದ ಶೃಂಗೇರಿ ದೇವಾಲಯ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ

sringeri
Published on

ಶೃಂಗೇರಿ : ರಾಜ್ಯ ಸರ್ಕಾರದ ಹೊಸ ನಿಯಮಾವಳಿಗೆ ಅನುಸಾರವಾಗಿ ಶ್ರೀ ಶೃಂಗೇರಿ ಮಠವು ಸೋಮವಾರದಿಂದ (ಜುಲೈ 5) ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಿದೆ. ಮಠದ ಆವರಣದಲ್ಲಿರುವ ದೇವಾಲಯಗಳಲ್ಲಿ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿರುತ್ತದೆ ಎಂದು ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂನ ಆಡಳಿತಾಧಿಕಾರಿ ವಿ.ಆರ್​.ಗೌರಿಶಂಕರ್​ ತಿಳಿಸಿದ್ದಾರೆ.

ಫೇಸ್​ ಮಾಸ್ಕ್​, ಸಾಮಾಜಿಕ ಅಂತರ, ಥರ್ಮಲ್​ ಸ್ಕ್ಯಾನಿಂಗ್​, ಸ್ಯಾನಿಟೈಸಿಂಗ್​ ಮುಂತಾದ ಕೋವಿಡ್​ ಪ್ರೋಟೋಕಾಲನ್ನು ಪೂರ್ಣವಾಗಿ ಪಾಲಿಸಲಾಗುವುದು. ಭಕ್ತರು ತಮ್ಮ ಆಧಾರ್​ ಕಾರ್ಡ್​ ಮತ್ತಿತರ ಗುರುತಿನ ಚೀಟಿಯನ್ನು ಜೊತೆಯಲ್ಲಿ ತರಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net