14ರಿಂದ ಕಲಶೇಶ್ವರ ಸ್ವಾಮಿ ಜಾತ್ರೆ

kalsheshwara temple
ಕಲಶೇಶ್ವರ ಸ್ವಾಮಿ
Published on

ಕಳಸ: ಪಟ್ಟಣದ ಶ್ರೀ ಕಲಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.14ರಿಂದ 22ರವರೆಗೆ ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಸ್.ಪ್ರೇಮಲತಾ ತಿಳಿಸಿದ್ದಾರೆ.
14 ರಂದು ಗಣಪತಿ ಪೂಜೆ, ಅಂಕುರಾರ್ಪಣ, 15ಕ್ಕೆ ಧ್ವಜಾರೋಹಣ, ಕೌತುಕೋತ್ಸವ, ವೃಷಭಾರೋಹಣ, 16ಕ್ಕೆ ಸಿಂಹರೋಹಣ, 17ಕ್ಕೆ ಮಯೂರಾರೋಹಣ, 18ಕ್ಕೆ ಹಂಸಾರೋಹಣ, 19ಕ್ಕೆ ಗಜರೋಹಣ ನೆರವೇರಲಿದೆ. 20ರಂದು ಬ್ರಹ್ಮ ರಥೋತ್ಸವ, ರಾತ್ರಿ ಮಹಾ ರಥೋತ್ಸವ ಜರುಗಲಿದೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಹಳುವಳ್ಳಿಯ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. 21ರಂದು ಕುಂಕುಮೋತ್ಸವ, ಮೃಗಯಾತ್ರೆ, ರುದ್ರತೀರ್ಥದಲ್ಲಿ ಅವಭೃತ ಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾವರೋಹಣ, 22ರಂದು ಮಹಾ ಸಂಪ್ರೋಕ್ಷಣೆ, ಲಮಂತ್ರಾಕ್ಷತೆಯೊಂದಿಗೆ ಉತ್ಸವಕ್ಕೆ ತೆರೆಬೀಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net