ಶ್ರೀ ದತ್ತಾತ್ರೇಯ ಸ್ವಾಮಿ ಪಲ್ಲಕ್ಕಿ ಉತ್ಸವ

datta jayanti
ದತ್ತ ಜಯಂತಿ ಅಂಗವಾಗಿ ಶಿಕಾರಿಪುರದಲ್ಲಿ ದತ್ತಾತ್ರೇಯ ಸ್ವಾಮಿ ಪಲ್ಲಕ್ಕಿ ಉತ್ಸವ ನೆರವೇರಿತು.
Published on

ಶಿಕಾರಿಪುರ: ದತ್ತ ಜಯಂತಿ ಅಂಗವಾಗಿ ಪಟ್ಟಣದ ಶ್ರೀ ದತ್ತ ಕೇವಲಾನಂದ ಆಶ್ರಮದಲ್ಲಿ ಪೂಜಾ ಕೈಂಕರ್ಯ, ಹೋಮ ಹವನಗಳು ನೆರವೇರಿದವು. ಭಾನುವಾರ ಶ್ರೀ ದತ್ತಾತ್ರೇಯ, ಶ್ರೀ ಸರಸ್ವತಿ, ಶ್ರೀ ಆದಿ ಶಂಕರಾಚಾರ್ಯರಿಗೆ ವಿಶೇಷ ಅಲಂಕಾರ, ಅಭಿಷೇಕ ಮತ್ತು ಪಾರಾಯಣ ರುದ್ರಾಭಿಷೇಕ, ಗುರುಗಳ ಪಾದಪೂಜೆ, ಸತ್ಯನಾರಾಯಣ ವ್ರತ ನೆರವೇರಿತು. ತೇರುಬೀದಿ ಸೇರಿ ವಿವಿಧ ಮಾರ್ಗಗಳಲ್ಲಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು. ವಿಪ್ರ ಮಹಿಳೆಯರು ಕೋಲಾಟ, ಭಜನೆ ಹಾಗೂ ಗಾಯನದ ಜತೆಗೆ ಉತ್ಸವದ ಜತೆಗೆ ಹೆಜ್ಜೆ ಹಾಕಿದರು. ಸಂಜೆ ತೊಟ್ಟಿಲು ಸೇವೆ, ಡೋಲೋತ್ಸವ, ಮಹಾಮಂಗಳಾರತಿ ನೆರವೇರಿತು. ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net