ಶ್ರೀ ಚೌಡಮ್ಮ ದೇವಿ ವಾರ್ಷಿಕೋತ್ಸವ

ಶ್ರೀ ಚೌಡಮ್ಮ ದೇವಿ ವಾರ್ಷಿಕೋತ್ಸವ
Published on

ಬೈಲಕುಪ್ಪೆ: ಗುಡ್ಡೆನಹಳ್ಳಿ ಗ್ರಾಮದ ಶ್ರೀ ಚೌಡಮ್ಮ ದೇವಿ ವಾರ್ಷಿಕೋತ್ಸವ ಅಂಗವಾಗಿ ವಿಶೇಷ ಪೂಜೆ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.
ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಟ್ರಸ್ಟ್ ವತಿಯಿಂದ ಮೊದಲನೇ ವರ್ಷದ ವಿಶೇಷ ಪೂಜೆ ನೆರವೇರಿಸಲಾಯಿತು. ಬುಧವಾರದಿಂದ ದೇವಾಲಯದಲ್ಲಿ ವಿವಿಧ ಹೋಮ-ಹವನಗಳು ನಡೆದವು. ಗುರುವಾರ ಬೆಳಗ್ಗೆ ಕಾವೇರಿ ನದಿಗೆ ಪೂಜೆ ಸಲ್ಲಿಸಿ ಶ್ರೀ ಚೌಡಮ್ಮನಿಗೆ ನವಚಂಡಿಯಾಗ, ಹೋಮ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಶುಕ್ರವಾರ ಬೆಳಗ್ಗೆ ದೇವಿಗೆ ಸೀರೆ, ಕುಪ್ಪಸ, ಬಳೆ, ಒಡವೆಗಳನ್ನು ಧರಿಸಿ, ವಿವಿಧ ಹೂಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಎಡೆ ನೈವೇದ್ಯ, ಅಭಿಷೇಕಗಳು ಹಾಗೂ ವಿಶೇಷ ಪೂಜೆ ಭಕ್ತರ ಸಮ್ಮುಖದಲ್ಲಿ ಜರುಗಿದವು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬೈಲಕುಪ್ಪೆ ಪೊಲೀಸ್ ಠಾಣಾ ಪಿಎಸ್‌ಐ ಮಹಾಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಶ್ರೀ ಚೌಡಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ಎಚ್.ಎಂ. ಚಂದ್ರು, ಸದಸ್ಯ ಗಿರೀಶ್, ಎನ್.ಸ್ವಾಮಿ, ತಿರುಮಲಪುರದ ರಾಜೇಗೌಡ, ಸೋಮಶೇಖರ್, ಸುರೇಶ್, ರಾಜು, ರಘು, ಮಹದೇವ್, ರಘು, ಚಂದ್ರು, ಉದಯ, ಭಾನುಪ್ರಕಾಶ್, ಮುರಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net