

ಹೈದ್ರಾಬಾದ್: ಸ್ಯಾಂಡಲ್ವುಡ್ನ ಕಿಸ್ ಬೆಡಗಿ, ನಟಿ ಶ್ರೀಲೀಲಾ ಇದೀಗ ಟಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದು, ಹಲವು ಸ್ಟಾರ್ ನಟರ ಸಿನಿಮಾಗೆ ನಾಯಕಿಯಾಗಿ ಅಭಿನಯಿಸುವ ಮುಖೇನ ಸಿಕ್ಕಾಪಟ್ಟೆ ಬ್ಯುಸಿಯಿರುವ ನಟಿ ಎಂಬ ಪಟ್ಟ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡ ಭಾಷೆಯ ಕುರಿತು ನಟ ಮಂಡ್ಯ ರಮೇಶ್ ಮನದಾಳದ ಮಾತು
ಇತ್ತೀಚೆಗಷ್ಟೇ ರಾಮ್ ಪೋತಿನೇನಿ ಜತೆಗೆ ನಟಿಸಿದ 'ಸ್ಕಂದ' ರಿಲೀಸ್ ಆಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿತು. ಸದ್ಯ ಈಗ ಮತ್ತೊಂದು ವಿಚಾರ ಕುರಿತಂತೆ ಶ್ರೀಲೀಲಾ ಸುದ್ದಿಯಲ್ಲಿದ್ದಾರೆ.
ಸದಾ ಒಂದಲ್ಲ ಒಂದು ಪಾಸಿಟಿವ್ ವಿಷಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಶ್ರೀಲೀಲಾ, ಟಾಲಿವುಡ್ ಸ್ಟಾರ್ ನಟರ ಸಿನಿಮಾಗಳಿಗೆ ಬಹು ಬೇಡಿಕೆಯ ನಾಯಕಿಯಾಗಿ ಆಯ್ಕೆಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಲಿಪ್ಲಾಕ್ ಸೀನ್ ಬಗ್ಗೆ ಬಹಿರಂಗವಾಗಿ ಮಾತನಾಡುವ ಮುಖೇನ ನೆಟ್ಟಿಗರ ವ್ಯಾಪಕ ಅಭಿಪ್ರಾಯಗಳಿಗೆ ಕಾರಣರಾಗಿದ್ದರು.
ಶ್ರೀಕಾಂತ್ ಎನ್. ರೆಡ್ಡಿ ನಿರ್ದೇಶನದ 'ಆದಿಕೇಶವ' ಚಿತ್ರದಲ್ಲಿ ಮೆಗಾ ಹೀರೋ ಪಂಜಾ ವೈಷ್ಣವ್ ತೇಜ್ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿದ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರ ಮತ್ತೆ ಸುದ್ದಿಯಲ್ಲಿದೆ. ಈ ಹಿಂದೆ ನಿರ್ಮಾಪಕ ನಾಗ ವಂಶಿ ಬಿಡುಗಡೆ ದಿನಾಂಕವನ್ನು ನವೆಂಬರ್ 10, 2023 ರಂದು ಘೋಷಿಸಿದ್ದರು. ಆದ್ರೆ ಇಂದು ಬದಲಾವಣೆ ತಂದಿದ್ದು, ನವೆಂಬರ್ 24 ರಂದು ರಿಲೀಸ್ ಮಾಡಲಿದ್ದೇವೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಚಿತ್ರದಲ್ಲಿ ವೈಷ್ಣವ್ ತೇಜ್, ಶ್ರೀಲೀಲಾ, ಅಪರ್ಣಾ ದಾಸ್, ಜೋಜು ಜಾರ್ಜ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ,(ಏಜೆನ್ಸೀಸ್).