ಟಾಲಿವುಡ್‌ ಅಂಗಳದಲ್ಲಿ ಸಂಚಲನ ಮೂಡಿಸಿದ ಶ್ರೀಲೀಲಾ; ಟಾಪ್ ನಟಿಯರ ಜಾಗಕ್ಕೆ ಇವರೇ ನಾಯಕಿ!

sreeleela
Published on

ಆಂಧ್ರಪ್ರದೇಶ: ಟಾಲಿವುಡ್​​ ಅಂಗಳದಲ್ಲಿ ಕನ್ನಡ ಚಿತ್ರರಂಗದ ನಟಿ ಶ್ರೀಲೀಲಾ ಹೆಸರು ಇದೀಗ ಭಾರಿ ಸದ್ದು ಮಾಡುತ್ತಿದೆ. ಟಾಪ್​ ನಟಿಯರ ಜಾಗಕ್ಕೆ ಈಗ ಇವರೇ ನಾಯಕಿ ಎಂಬುದು ಸದ್ಯದ ಟ್ರೆಂಡ್ ಆಗಿದೆ.

ಸ್ಯಾಂಡಲ್​​ವುಡ್​​ನಲ್ಲಿ 'ಕಿಸ್​' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಶ್ರೀಲೀಲಾ, 'ಭರಾಟೆ', 'ಬೈಟು ಲವ್'​​ ಸಿನಿಮಾಗಳ ನಂತರ ಇದೀಗ ಟಾಲಿವುಡ್​​ನ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ತಮಿಳಿನ ಟಾಪ್​ ನಟರ ಫಿಲಂಗಳಿಗೆ ಇವರೇ ನಾಯಕಿಯಾಗಿ ಅಭಿನಯಿಸುತ್ತಿರುವುದು ಸದ್ಯ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಸುಮಾರು 10 ಚಿತ್ರಗಳಲ್ಲಿ ನಟಿಸುವ ಮೂಲಕ ಸದ್ಯ ಟಾಲಿವುಡ್‌ನಲ್ಲಿ ಹೊಸ ಸಂಚಲನ ಮೂಡಿಸಿರುವ ನಟಿ ಶ್ರೀಲೀಲಾ, ತೆಲುಗು ಚಿತ್ರರಂಗದ ಸ್ಟಾರ್​​ ನಟಿಯರಿಗೆ ಪೈಪೋಟಿ ನೀಡುವಲ್ಲಿ ಇದೀಗ ಮುಂಚೂಣಿಯಲ್ಲಿದ್ದಾರೆ. ರವಿತೇಜಾ ಅವರೊಟ್ಟಿಗೆ 'ಧಮಾಕಾ' ಚಿತ್ರದಲ್ಲಿ ಮಾಡಿದ ಅಭಿನಯಕ್ಕೆ ಸಿನಿಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡಿದ್ದರು. ಈ ಸಿನಿಮಾದ ಮೂಲಕ ಕಡಿಮೆ ಅವಧಿಯಲ್ಲಿ ಅನೇಕ ಅಭಿಮಾನಿಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

'ಸ್ಕಂದ', 'ಭಗವಂತ ಕೇಸರಿ', 'ಉಸ್ತಾದ್ ಭಗತ್ ಸಿಂಗ್', 'ನಿತಿನ್ 32', 'ವಿಡಿ 12' ಮತ್ತು 'ಗುಂಟೂರ್ ಕಾರಮ್' ಚಿತ್ರಗಳಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಪ್ರತಿ ಚಿತ್ರಕ್ಕೂ ಶ್ರೀಲೀಲಾ ಮೊದಲ ಆಯ್ಕೆ ಎಂಬುದು ಸದ್ಯ ಟಾಲಿವುಡ್ ಅಂಗಳದ ಸುದ್ದಿ! ಸ್ಟಾರ್ ನಟರಾದ ಮಹೇಶ್​​ ಬಾಬು, ರವಿತೇಜಾ, ನಿತಿನ್, ವಿಜಯ್​ ದೇವರಕೊಂಡ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಸೇರಿದಂತೆ ಟಾಪ್ ನಟರ ಚಿತ್ರಗಳಿಗೆ ಇದೀಗ ಶ್ರೀಲೀಲಾ ಅವರೇ ನಾಯಕಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net