More

    ಬಿಳಿ ಕೂದಲು ಕಪ್ಪಾಗಲು ಮನೆಯಲ್ಲಿ ಈ ಪುಡಿ ಇದ್ದರೆ ಸಾಕು…!

    ಬೆಂಗಳೂರು: ಬಿಳಿಗೂದಲು ಕಪ್ಪಾಗಲು ಹೇರ್‌ಡೈ ಹಚ್ಚಿಕೊಳ್ಳುವುದು ಸರ್ವೇಸಾಮಾನ್ಯ. ಹೇರ್‌ಡೈ ಹೊರತುಪಡಿಸಿ ಬೇರೆ ಉಪಾಯವೂ ಇಲ್ಲ. ಆದರೆ ಹೇರ್‌ಡೈಗಳಲ್ಲಿ ರಾಸಾಯನಿಕ ಅಂಶವಿದ್ದೇ ಇರುತ್ತದೆ. ಚರ್ಮದ ಅಲರ್ಜಿಯಿರುವವರಿಗೆ ಹೇರ್‌ಡೈನಿಂದಲೂ ಅಲರ್ಜಿ ಉಂಟಾಗಬಹುದು. ಇದನ್ನು ಬಳಸುವಾಗ ಎಚ್ಚರವಿರಲಿ. ಮಾರುಕಟ್ಟೆಯಲ್ಲಿ ದೊರೆಯುವ ಅಗ್ಗದ ಡೈಗಳಿಂದ ದುಷ್ಪರಿಣಾಮಗಳು ಅಧಿಕ. ಆದ್ದರಿಂದ ಉತ್ತಮ ಗುಣಮಟ್ಟದ ಡೈಗಳನ್ನು ಬಳಸುವುದು ಒಳ್ಳೆಯದು.


    ಯಾರೇ ಆಗಲಿ ಡೈ ಉಪಯೋಗಿಸುವ ಮುಂಚೆ ಎಲ್ಲಿಯಾದರೂ ಒಂದೆಡೆ ಹಚ್ಚಿಕೊಂಡು ಅಲರ್ಜಿಯಂತಹ ತೊಂದರೆಯಾಗುತ್ತದೋ ಇಲ್ಲವೋ ತಿಳಿದುಕೊಳ್ಳುವುದು ಒಳಿತು. ಪದೇ ಪದೆ ಡೈ ಬಳಸುವುದರಿಂದ ಮುಖದ ಚರ್ಮ ವರ್ಷಗಳ ನಂತರ ಕಪ್ಪಾಗಬಹುದು.


    ಡೈಗಿಂತ ಉತ್ತಮವಾದದ್ದು ಮೆಹಂದಿ ಬಳಸುವುದು. ಮೆಹಂದಿ ಮತ್ತು ನೆಲ್ಲಿಕಾಯಿ ಪುಡಿಯನ್ನು ಸಮಭಾಗ ರಾತ್ರಿ ನೆನೆಯಿಟ್ಟು ಬೆಳಗ್ಗೆ ತಲೆಗೆ ಹಚ್ಚಿಕೊಂಡು ಎರಡು-ಮೂರು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡುವುದರಿಂದ ಬಿಳಿಗೂದಲು ಬಣ್ಣ ಕೆಂಚಗಾಗುವುದು. ಇದನ್ನು ೧೫ ದಿನಗಳಿಗೊಮ್ಮೆ ಹಚ್ಚಿಕೊಳ್ಳಬಹುದು. ಮೆಹಂದಿಯಿಂದ ಯಾವುದೇ ಬಗೆಯ ದುಷ್ಪರಿಣಾಮ ಉಂಟಾಗುವುದಿಲ್ಲ ಮತ್ತು ಮೆಹಂದಿ ಕಂಡೀಷನರ್‌ನಂತೆ ಕೆಲಸ ಮಾಡುತ್ತದೆ. ಅದಕ್ಕೆ ಮೆಹಂದಿಯನ್ನು ‘ನ್ಯಾಚುರಲ್ ಹೇರ್‌ಡೈ’ ಎಂದು ಕರೆಯಲಾಗುತ್ತದೆ. ಅಂಗಡಿಯಲ್ಲಿ ದೊರೆಯುವ ಮೆಹಂದಿ ಪುಡಿಗೆ ಬದಲು ಗೋರಂಟಿ ಸೊಪ್ಪು ಬಳಸುವುದು ಅತ್ಯುತ್ತಮ.

    ಮೆಹಂದಿಯನ್ನು ಬಿಳಿಗೂದಲು ಮಾತ್ರವಲ್ಲದೇ ಯಾವುದೇ ವಯಸ್ಸಿನವರಾಗಲೀ ತಲೆಗೆ ಹಚ್ಚಿಕೊಳ್ಳುವುದರಿಂದ ತಲೆಗೂದಲ ಅಂದ ಹೆಚ್ಚುವುದಲ್ಲದೇ ಕೂದಲು ಮೃದುವಾಗಿ, ಕಾಂತಿಯುಕ್ತವಾಗುತ್ತದೆ. ತಲೆನೋವು, ಕಣ್ಣುರಿ, ಕೆಂಪಾಗುವುದು ಮುಂತಾದ ಸಮಸ್ಯೆಗಳಿಗೂ ಬಾಧಿಸುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts