

ಚರ್ಮದ ಸೌಂದರ್ಯ ವರ್ಧಿಸಬೇಕೆಂದು ಬಯಸುವವರಿಗೆ ಅಭ್ಯಂಗ (ಎಣ್ಣೆ ಸ್ನಾನ) ಉತ್ತಮ ಮಾರ್ಗೋಪಾಯ.
*ಒಣಚರ್ಮದವರು ವಾರಕ್ಕೆರಡು ಬಾರಿ ಅಭ್ಯಂಗ ಮಾಡಬೇಕು. ಇದರಿಂದ ಚರ್ಮ ಬಿರುಕು ಬಿಡುವುದು ಮತ್ತು ಚರ್ಮದ ಕಾಯಿಲೆಗಳು ಬಾಧಿಸುವುದಿಲ್ಲ. *ಅಭ್ಯಂಗದಿಂದ ದೇಹದಲ್ಲಿ ರಕ್ತಪರಿಚಲನೆ ಸರಾಗವಾಗಿ ಆಗಲು ಸಹಕಾರಿಯಾಗುತ್ತದೆ.
*ಚರ್ಮ ಕಾಂತಿಯುತವಾಗುತ್ತದೆ.
*ದೇಹದ ಎಲ್ಲ ಜೀವಕೋಶಗಳಿಗೆ ಆಮ್ಲಜನಕ ತಲುಪುವಲ್ಲಿ ಸಹಾಯ ಮಾಡುತ್ತದೆ. *ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
*ಏಕಾಗ್ರತೆ, ಬುದ್ಧಿಶಕ್ತಿ, ಆತ್ಮವಿಶ್ವಾಸ ಹೆಚ್ಚುತ್ತದೆ.
*ಪ್ರತಿಯೊಬ್ಬರೂ ವಾರಕ್ಕೊಮ್ಮೆ ಇಲ್ಲವೇ ಹದಿನೈದು ದಿನಗಳಿಗೊಮ್ಮೆ ಅಭ್ಯಂಗವನ್ನು ರೂಢಿಸಿಕೊಳ್ಳಬೇಕು.
*ಅಭ್ಯಂಗವು ದೇಹದ ಆಯಾಸ, ಬಳಲಿಕೆಯನ್ನು ಪರಿಹರಿಸಿ ಚೈತನ್ಯ ಮೂಡಿಸುತ್ತದೆ.
*ಪ್ರತಿದಿನ ರಾತ್ರಿ ನೆತ್ತಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಮಲಗಬೇಕು. ಅಲ್ಲದೇ ಪಾದಗಳಿಗೂ ಪ್ರತಿದಿನ ರಾತ್ರಿ ಮಲಗುವ ಸಮಯದಲ್ಲಿ ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡು ಸ್ವಲ್ಪ ಹೊತ್ತು ಬಿಸಿನೀರಿನಲ್ಲಿ ಕಾಲಿಟ್ಟುಕೊಂಡಿದ್ದು ನಂತರ ಒರೆಸಿಕೊಂಡು ಮಲಗಿದಲ್ಲಿ ನಿದ್ರೆ ಚೆನ್ನಾಗಿ ಬರುವುದಲ್ಲದೇ ಪಾದಗಳ ಉರಿ ತಗ್ಗುತ್ತದೆ ಮತ್ತು ಅಂಗಾಲು ಮೃದುವಾಗಿರುತ್ತದೆ. ಸಕ್ಕರೆ ಕಾಯಿಲೆಯವರಿಗೂ ಈ ಪಾದಾಭ್ಯಂಗ ಬಹಳ ಉತ್ತಮವಾದುದು.