More

    ಕೌಡ್ಲೆ ಗ್ರಾಮದಲ್ಲಿ ಆಷಾಢ ಮಾಸದ ಅಂಗವಾಗಿ ಪಟ್ಟಲದಮ್ಮ ದೇವಿಗೆ ವಿಶೇಷ ಪೂಜೆ

    ಮದ್ದೂರು: ತಾಲೂಕಿನ ಕೌಡ್ಲೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಪಟ್ಟಲದಮ್ಮ ದೇಗುಲದಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
    ಆಷಾಢ ಶುಕ್ರವಾರದ ಅಂಗವಾಗಿ ದೇವರಿಗೆ ವಿಶೇಷ ಹೂಗಳಿಂದ ಅಲಂಕಾರ ಹಾಗೂ ಶ್ರೀ ಚಕ್ರಕ್ಕೆ ಫಲಪಂಚಾಮೃತ ಅಭಿಷೇಕ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿತರಣೆ ಮಾಡಲಾಯಿತು.
    ಸಮಾಜ ಸೇವಕ ಚಿತ್ರಾರಮೇಶ್ ಮಾತನಾಡಿ, ಕೊನೆಯ ಆಷಾಢ ಶುಕ್ರವಾರದ ಅಂಗವಾಗಿ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಕೌಡ್ಲೆ ಶ್ರೀ ಪಟ್ಟಲದಮ್ಮ ದೇವಿ ಶಕ್ತಿ ದೇವತೆಯಾಗಿದ್ದು, ಭಕ್ತಾಧಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಜಗನ್ಮಾತೆಯಾಗಿದ್ದಾಳೆ. ಆದ್ದರಿಂದ ಈ ದೇವರಿಗೆ ರಾಜ್ಯಾದ್ಯಂತ ಹೆಚ್ಚಿನ ಭಕ್ತ ಸಮುದಾಯ ಇದೆ ಎಂದರು. ದೇವರಿಗೆ ಹೂವಿನ ಅಲಂಕಾರದ ಖರ್ಚಾನ್ನು ದಾನಿಗಳಾದ ಚಿತ್ರ ರಮೇಶ್ ಕುಟುಂಬ ವಹಿಸಿಕೊಂಡು, ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಿಸುವ ಮೂಲಕ ಭಕ್ತಾದಿಗಳ ಗಮನ ಸೆಳೆಯುವಂತೆ ಮಾಡಿದ್ದರು.
    ದೇಗುಲದ ಪ್ರಧಾನ ಅರ್ಚಕ ನವೀನ್ ಶ್ರೀ ಗೋಪಾಲ್, ಮುಖಂಡರಾದ ಶ್ರೀನಿವಾಸ್, ಸ್ವಾಮಿ, ಶ್ರೀಧರ್, ನಾರಾಯಣ್, ರಾಜೀವ್, ಕೆಂಪಣ್ಣ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts