ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿ

sports (1)
ಬಾಳೆಹೊನ್ನೂರಿನ ಇಟ್ಟಿಗೆ ಸೀಗೋಡಿನಲ್ಲಿ ಆಯೋಜಿಸಿದ್ದ ನಮ್ಮ ವಾರ್ಡ್ ನಮ್ಮ ಹಬ್ಬ ಕಾರ್ಯಕ್ರಮದ ಗೋಣಿ ಚೀಲದ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವತಿಯರು.
Published on

ಬಾಳೆಹೊನ್ನೂರು: ಒತ್ತಡ ನಿವಾರಣೆ ಮಾಡಲು ಇಟ್ಟಿಗೆ ಸೀಗೋಡು ಗ್ರಾಮಸ್ಥರಿಗೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿಯ ಇಟ್ಟಿಗೆ ಸೀಗೋಡು 9ನೇ ವಾರ್ಡ್ ಸದಸ್ಯ ಬಿ.ಕೆ.ಮಧುಸೂದನ್ ಹೇಳಿದರು.

ಭಾನುವಾರ ಆಯೋಜಿಸಿದ್ದ ನಮ್ಮ ವಾರ್ಡ್ ನಮ್ಮ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳು ಇತ್ತೀಚೆಗೆ ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳಿಗೆ ಒತ್ತು ನೀಡಲಾಗಿದೆ. ಗ್ರಾಮಸ್ಥರು ಸಹ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.
ಗೋಣಿ ಚೀಲದ ಓಟ, ಮಡಕೆ ಒಡೆಯುವುದು, ಲೆಮನ್ ಆನ್ ಸ್ಪೂನ್, ಅರೌಂಡ್ ದ ವಿಕೆಟ್, ಬಲಾಬಲ ಪ್ರದರ್ಶನ, ಹಗ್ಗ ಜಗ್ಗಾಟ, ವಾಟರ್ ಪಾಸ್, ಬಲೂನ್ ಆಟ ವಿವಿಧ ಆಟೋಟಗಳನ್ನು ಆಡಿಸಿ ಬಹುಮಾನ ವಿತರಿಸಿದರು.
ಪುಷ್ಪಾ ಟಿ.ಡಿ. ರಾಜೇಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಮಾಜಿ ಸದಸ್ಯ ಮಹಮ್ಮದ್ ಇ್ತೆಖಾರ್ ಆದಿಲ್, ತಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಬಿ.ಸಿ.ಸಂತೋಷ್‌ಕುಮಾರ್, ಫಿಲೋಮಿನಾ, ಪ್ರತಿಮಾ ಪ್ರಶಾಂತ್, ಕಾಫಿ ಬೆಳೆಗಾರ ಕೆ.ಸಿ.ಕೇಶವಗೌಡ, ಸ್ಥಳೀಯರಾದ ಲೋಕಯ್ಯ ಪೂಜಾರಿ, ಬೋಜಣ್ಣ, ಲೂಯಿಸ್, ಹಿರಿಯ ಕ್ರೀಡಾಪಟು ಒ.ಡಿ.ಸ್ಟೀನ್, ಸುರೇಂದ್ರ ಮಾಸ್ತರ್ ಇತರರಿದ್ದರು. ಕ್ರೀಡಾಕೂಟದಲ್ಲಿ ಆದರ್ಶನಗರ, ಇಟ್ಟಿಗೆ ಸೀಗೋಡು, ಶಿವನಗರ, ಇಟ್ಟಿಗೆ, ದೊಡ್ಡಹಡ್ಲು, ಕುತ್ರಡ್ಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net