ಉತ್ತಮ ಭವಿಷ್ಯಕ್ಕೆ ಕ್ರೀಡಾ ಕ್ಷೇತ್ರ ಸಹಕಾರಿ

avt sanmana
ಆನವಟ್ಟಿಯಲ್ಲಿ ಕಬಡ್ಡಿ ಕ್ರೀಡಾ ಸಾಧಕಿ ಕೃತಜ್ಞಾ, ಕೋಚ್ ಪ್ರವೀಣ್ ಅವರನ್ನು ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು. ಬಸವಕುಮಾರ್ ಗಾಳೇರ್, ಮಲ್ಲಿಕಾರ್ಜುನ, ಮಿಲನ್ ಪಾಟೀಲ್, ಮಧು ಗೌಡ, ಶಿವನ ಗೌಡ ಇತರರಿದ್ದರು.
Published on

ಆನವಟ್ಟಿ: ಕ್ರೀಡೆ ವಿದ್ಯಾಭ್ಯಾಸದ ಒಂದು ಭಾಗ. ಮಕ್ಕಳು ಓದಿನ ಜತೆಗೆ ಕ್ರೀಡೆಗೂ ಮಹತ್ವ ನೀಡುವುದರಿಂದ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅವಧಿಯಲ್ಲಿ ನೆರವಾಗುತ್ತದೆ ಎಂದು ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಗುರುಕುಮಾರ ಪಾಟೀಲ್ ತಿಳಿಸಿದರು.

ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ಕ್ರೀಡಾ ಸಾಧಕಿ ಕೃತಜ್ಞಾ ಹಾಗೂ ಕೋಚ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಸಾಧಕರಾಗುವಂತೆ ಪಾಲಕರು ಪ್ರೇರೇಪಿಸಬೇಕು ಎಂದರು.

ಮಕ್ಕಳು ಬಾಲ್ಯದಲ್ಲೇ ಯಾವುದೇ ಪಠ್ಯೇತರ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳಬೇಕು. ಕ್ರೀಡೆಯಲ್ಲಿ ವಿಶ್ವ ಪ್ರಸಿದ್ಧಿ ಆದವರು ಬಹಳ ಜನರಿದ್ದಾರೆ. ಅವರೆಲ್ಲರೂ ಸಾಧನೆಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಅದರ ಪ್ರತಿಲವಾಗಿ ಇಂದು ಸಮಾಜದಲ್ಲಿ ಅವರ ಹೆಸರು ಶಾಶ್ವತವಾಗಿದೆ ಎಂದು ಹೇಳಿದರು.

ಆನವಟ್ಟಿ ಸಮೀಪದ ದ್ವಾರಹಳ್ಳಿ ಗ್ರಾಮದ ಕ್ರೀಡಾ ಪ್ರತಿಭೆ ಕೃತಜ್ಞಾ ಪ್ರಸ್ತುತ ರಾಣೆಬೆನ್ನೂರಿನ ನಿಟ್ಟೂರ್ ಸೆಂಟ್ರಲ್ ಸ್ಕೂಲ್‌ನಲ್ಲಿ 6ನೇ ತರಗತಿ ಓದುತ್ತಿದ್ದಾರೆ. ಈಕೆ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಹರಿಯಾಣದ ದತ್ತೂರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಷ್ಟ್ರೀಯ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಕೃತಜ್ಞಾ ಹಾಗೂ ಕೋಚ್ ಎಂ.ಪ್ರವೀಣ್ ಅವರನ್ನು ಗೌರವಿಸಲಾಯಿತು.

ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ, ವಿದ್ಯಾರ್ಥಿನಿ ತಂದೆ ಬಸವಕುಮಾರ್ ಗಾಳೇರ್, ಮಿಲನ್ ಪಾಟೀಲ್, ಮಧು ಗೌಡ, ನಿರ್ದೇಶಕರಾದ ಶಿವನ ಗೌಡ, ಚನ್ನಬಸಪ್ಪ ಗೌಡ, ಕುಸುಮಾ, ನಿಂಗಪ್ಪ ಮೇಸ್ಟ್ರು, ಗಿರೀಶ್ ಗೌಡ, ವೀರನ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net