

ದುಬೈ: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಮ್ಯಾಕ್ಸ್ ಚಿತ್ರಕ್ಕೆ ಸದ್ಯ ಭಾರೀ ನಿರೀಕ್ಷೆ ವ್ಯಕ್ತವಾಗುತ್ತಿದ್ದು, ಸಿನಿಮಾ ಬಿಡುಗಡೆಯತ್ತ ಅಭಿಮಾನಿಗಳ ಚಿತ್ತ ಮೂಡಿದೆ. ಈ ಮಧ್ಯೆ ಸಿಸಿಎಲ್ ಪಂದ್ಯಗಳಿಗಾಗಿ ದುಬೈಗೆ ಭೇಟಿ ನೀಡಿದ ಸುದೀಪ್ ಅವರಿಗೆ ವಿಶೇಷ ಸ್ವಾಗತ ಕೋರಲಾಗಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಶಾರ್ಜಾದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ಮುಂಬೈ ಹೀರೋಸ್ ನಡುವಿನ ಸಿಸಿಎಲ್ 2024ರ ಪಂದ್ಯಕ್ಕೂ ಮುನ್ನ ನಟ ಕಿಚ್ಚ ಸುದೀಪ್ ತಂಡವನ್ನು ಸೇರಿಕೊಂಡಿದ್ದಾರೆ. ಫ್ರಾಂಚೈಸಿಯ ನಾಯಕರಾಗಿದ್ದ ಸುದೀಪ್ ಎರಡು ಬಾರಿ ಸಿಸಿಎಲ್ ಟ್ರೋಫಿ ಗೆದ್ದಿದ್ದಾರೆ. 2013 ಹಾಗೂ 2014ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ಪೈನಲ್ನಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.
ಅತ್ಯಾಸಕ್ತಿಯ ಕ್ರಿಕೆಟಿಗರಾಗಿರುವ ಸುದೀಪ್ ಇದೀಗ ಈ ಟೂರ್ನಿಯ ಹತ್ತನೇ ಆವೃತ್ತಿಗೆ ಮರಳಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಕ್ಯಾಪ್ಟನ್ ಮತ್ತು ಮಾಲೀಕರಾಗಿ ಆಡಿದ ಅನುಭವ ಮತ್ತು ಸಲಹೆಗಳನ್ನು ತಮ್ಮ ಉಪಸ್ಥಿತಿಯ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಮೂರನೇ ಬಾರಿಗೆ ಟ್ರೋಫಿ ತಂದುಕೊಡುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.